ಡಾ. ನಾಗೇಂದ್ರ ಆತ್ಮಹತ್ಯೆ: ಮುಷ್ಕರ ಕೈ ಬಿಟ್ಟು ನಾಳೆಯಿಂದ ಕರ್ತವ್ಯಕ್ಕೆ ವೈದ್ಯರು ವಾಪಸ್

ನಂಜನಗೂಡು THO ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷ್ಕರ ಕೈ ಬಿಟ್ಟು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಡಾ. ಶ್ರೀನಿವಾಸ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ. 

First Published Aug 23, 2020, 4:02 PM IST | Last Updated Aug 23, 2020, 4:02 PM IST

ಮೈಸೂರು (ಆ. 23): ನಂಜನಗೂಡು THO ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷ್ಕರ ಕೈ ಬಿಟ್ಟು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಡಾ. ಶ್ರೀನಿವಾಸ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ. 

ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಚಿಕಿತ್ಸೆ ನೀಡದೇ ಮುಷ್ಕರ ಮಾಡುತ್ತಾ ಕೂತರೆ ರೋಗಿಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ ಮುಷ್ಕರ ಕೈ ಬಿಟ್ಟು ನಾಳೆಯಿಂದ ವೈದ್ಯರೆಲ್ಲರೂ ಕರ್ತವ್ಯಕ್ಕೆ ಹಾಜರಾಗುತ್ತಾರೆ' ಎಂದು ಹೇಳಿದ್ದಾರೆ. 

ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ: IAS ಅಧಿಕಾರಿ ಮಿಶ್ರಾ ಬೆಂಬಲಕ್ಕೆ ಪಿಡಿಒಗಳು