40 ವರ್ಷಗಳ ಹಿಂದೆ ಮೀನು ಹಿಡಿಯುತ್ತಿದ್ದ ಡಿಕೆ 'ಕೈ' ಕಿಂಗ್ ಆಗಿದ್ದು ಹೇಗೆ?

ಕಾಂಗ್ರೆಸ್ ಟ್ರಬಲ್ ಶೂಟರ್, ಸವಾಲಿಗೆ ಸೈ ಎನ್ನುವ ಕನಕಪುರ ಬಂಡೆ ಡಿಕೆ ಶಿವಕುಮಾರ್ ಕೆಪಿಸಿಸಿ ಚುಕ್ಕಾಣಿ ಹಿಡಿದಿದ್ದಾರೆ. ಪಟ್ಟಾಭಿಷೇಕಕ್ಕೆ ತಯಾರಿ ನಡೆಸುತ್ತಿರುವ ಡಿಕೆಶಿ, ಸೂರ್ಯಗ್ರಹಣದ ದಿನ ವಿಶೇಷ ಜಾಗವೊಂದಕ್ಕೆ ಭೇಟಿ ನೀಡಿದ್ದಾರೆ. ಈ ಜಾಗಕ್ಕೂ, ಡಿಕೆ ಸಾಹೇಬರಿಗೂ ಸುದೀರ್ಘ ನಂಟು.!

First Published Jun 23, 2020, 6:54 PM IST | Last Updated Jun 23, 2020, 6:58 PM IST

ಬೆಂಗಳೂರು (ಜೂ. 23): ಕಾಂಗ್ರೆಸ್ ಟ್ರಬಲ್ ಶೂಟರ್, ಸವಾಲಿಗೆ ಸೈ ಎನ್ನುವ ಕನಕಪುರ ಬಂಡೆ ಡಿಕೆ ಶಿವಕುಮಾರ್ ಕೆಪಿಸಿಸಿ ಚುಕ್ಕಾಣಿ ಹಿಡಿದಿದ್ದಾರೆ. ಪಟ್ಟಾಭಿಷೇಕಕ್ಕೆ ತಯಾರಿ ನಡೆಸುತ್ತಿರುವ ಡಿಕೆಶಿ, ಸೂರ್ಯಗ್ರಹಣದ ದಿನ ವಿಶೇಷ ಜಾಗವೊಂದಕ್ಕೆ ಭೇಟಿ ನೀಡಿದ್ದಾರೆ. ಈ ಜಾಗಕ್ಕೂ, ಡಿಕೆ ಸಾಹೇಬರಿಗೂ ಸುದೀರ್ಘ ನಂಟು.

ಮಹಾತ್ಮರು, ದೊಡ್ಡವರು ಅಂತ ಹೇಳುತ್ತಲೇ ಡಿಸಿಎಂಗೆ ಸೂಕ್ಷ್ಮವಾಗಿ ತಿರುಗೇಟು ಕೊಟ್ಟ ಡಿಕೆಶಿ

ಡಿಕೆ ಶಿವಕುಮಾರ್ ದೈವ ಭಕ್ತರು. ಆಗಾಗ ದೇವಸ್ಥಾನಗಳಿಗೆ ತೆರಳಿ ಪೂಜೆ, ಪುನಸ್ಕಾರ, ಹೋಮ ಹವನಾದಿಗಳನ್ನು ಮಾಡಿಸುತ್ತಿರುತ್ತಾರೆ. ಗ್ರಹಣದ ದಿನ ದೊಡ್ಡಾಲ ಮರದ ಕಾವೇರಿ ನದಿ ಸಂಗಮಕ್ಕೆ ತೆರಳಿ ಗ್ರಹಣ ಸ್ನಾನ ಮಾಡಿದ್ದಾರೆ. ಪಕ್ಕದಲ್ಲೇ ಇರುವ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. 4 ದಶಕಗಳ ನಂತರ ಈ ಜಾಗಕ್ಕೆ ಬಂದಿದ್ದಾರೆ ಡಿಕೆಶಿ. ಈ ಜಾಗಕ್ಕೂ ಡಿಕೆಶಿಗೂ ಇರುವ ನಂಟೇನು? 40 ವರ್ಷಗಳ ಡಿಕೆ ಸಾಹೇಬರು ಏನು ಮಾಡುತ್ತಿದ್ದರು ಇಲ್ಲಿದೆ ನೋಡಿ..!