ಧಾರವಾಡದಲ್ಲಿ ಮುಸ್ಲಿಂ ಅಂಗಡಿ ತೆರವು: ನನ್ನನ್ನು ಕೊಂದು ಬಿಡಿ ಎಂದು ಅಂಗಡಿ ಮಾಲಿಕ ಕಣ್ಣೀರು

'15 ವರ್ಷಗಳಿಂದ ಹನುಮಂತ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಶನಿವಾರ ಏಕಾಏಕಿ ಹತ್ತುಕ್ಕೂ ಹೆಚ್ಚು ಕಾರ‍್ಯಕರ್ತರು ಅಂಗಡಿಗಳಿಗೆ ನುಗ್ಗಿ ಆರು ಕ್ವಿಂಟಲ್‌ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಹಾಕಿದರು: ಅಂಗಡಿ ಮಾಲೀಕ ನಬೀಸಾಬ

First Published Apr 10, 2022, 4:20 PM IST | Last Updated Apr 10, 2022, 4:20 PM IST

ಧಾರವಾಡ (ಏ. 10): ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ನಾಲ್ಕು ಹಿಂದೂಯೇತರ ಅಂಗಡಿಗಳಿದ್ದವು. ಈ ಅಂಗಡಿಗಳನ್ನು ತೆರವು ಮಾಡಿ, ಇಲ್ಲದೇ ಹೋದಲ್ಲಿ ನಾವೇ ತೆರವುಗೊಳಿಸುತ್ತೇವೆ ಎಂದು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದ ಶ್ರೀರಾಮ ಸೇನೆ ಕಾರ‍್ಯಕರ್ತರು ಒಂದೇ ವಾರದಲ್ಲಿ ಮುಸ್ಲಿಂ ಸಮುದಾಯದ ಎರಡು ತೆಂಗಿನಕಾಯಿ ಹಾಗೂ ಎರಡು ಜ್ಯೂಸ್‌ ಅಂಗಡಿಗಳನ್ನು ಸ್ವತಃ ಹಣ್ಣು-ತೆಂಗಿನಕಾಯಿಗಳನ್ನು ಹೊರಗೆ ಚೆಲ್ಲುವ ಮೂಲಕ ತೆರವುಗೊಳಿಸಿದ್ದಾರೆ.

ಸೈಮನ್‌ಗೆ 5 ಲಕ್ಷ ರೂಪಾಯಿ ಕೊಟ್ಟು ಹೇಳಿಕೆ ಕೊಡಿಸ್ತಿದ್ದಾರೆ: ಜಮೀರ್

'15 ವರ್ಷಗಳಿಂದ ಹನುಮಂತ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಶನಿವಾರ ಏಕಾಏಕಿ ಹತ್ತುಕ್ಕೂ ಹೆಚ್ಚು ಕಾರ‍್ಯಕರ್ತರು ಅಂಗಡಿಗಳಿಗೆ ನುಗ್ಗಿ ಆರು ಕ್ವಿಂಟಲ್‌ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಹಾಕಿದರು. ಈಗಾಗಲೇ ನಿಮಗೆ ಅಂಗಡಿ ತಗೀಬೇಕು ಎಂದು ಹೇಳಲಾಗಿತ್ತು. ಆದರೂ ಹಚ್ಚಿರುವೆ ಎಂದು ದಬಾಯಿಸಿ ಅಂಗಡಿಯ ಹಣ್ಣುಗಳನ್ನು ಹೊರ ಹಾಕಿ ಚೆಲ್ಲಾಪಿಲ್ಲಿಯಾಗಿ ಎಸೆದರು. ದೇವಸ್ಥಾನದವರು ಮುಂದಿನ ವಾರದಲ್ಲಿ ಅಂಗಡಿ ತೆರವು ಮಾಡಲು ಹೇಳಿದ್ದರು. ಆದರೆ, ಹೊಟ್ಟೆಪಾಡಿಗಾಗಿ ಇದೊಂದು ದುಡಿಮೆ. ಈ ರೀತಿ ಆಗಿದ್ದು ಬಡವರ ಬದುಕು ಹೇಗೆ' ಎಂದು ಹಣ್ಣಿನ ಅಂಗಡಿ ಮಾಲೀಕ ನಬೀಸಾಬ ಪ್ರಶ್ನಿಸಿದರು.