
ಧರ್ಮಸ್ಥಳ ವಿವಾದಕ್ಕೆ ಕೇಂದ್ರ ತನಿಖಾ ಸಂಸ್ಥೆಗಳ ಪ್ರವೇಶ ಸಾಧ್ಯತೆ, ರಾಜ್ಯದಲ್ಲಿ ತಲ್ಲಣ?
ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಆರೋಪಗಳು ನ್ಯಾಯದ ಹೋರಾಟವಲ್ಲ, ಬದಲಾಗಿ ಒಂದು ದೊಡ್ಡ ಷಡ್ಯಂತ್ರದ ಭಾಗವಾಗಿರಬಹುದು. ವಿದೇಶಿ ಹಿತಾಸಕ್ತಿಗಳು ಮತ್ತು ಸಂಸ್ಥೆಗಳ ಕೈವಾಡದ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಅಮಿತ್ ಶಾ ರಾಷ್ಟ್ರೀಯ ತನಿಖೆಗೆ ಆದೇಶಿಸಬಹುದು.
ಬೆಂಗಳೂರು (ಆ.21): ಇತ್ತೀಚೆಗೆ ಧರ್ಮಸ್ಥಳ ಕ್ಷೇತ್ರದ ಸುತ್ತಲೂ ಹರಿದಾಡುತ್ತಿರುವ ಆರೋಪಗಳು ಕೇವಲ ನ್ಯಾಯದ ಹೋರಾಟವಲ್ಲ, ಬದಲಾಗಿ ಒಂದು ದೊಡ್ಡ ಷಡ್ಯಂತ್ರದ ಭಾಗವಾಗಿರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಸುಳ್ಳಿನ ಷಡ್ಯಂತ್ರ: ಸುಜಾತಾ ವಿರುದ್ಧ ತಿರುಗಿಬಿದ್ದ ವಸಂತಿ ಕುಟುಂಬಸ್ಥರು!
ಈ ಪ್ರಕರಣದ ಹಿಂದೆ ವಿದೇಶಿ ಹಿತಾಸಕ್ತಿಗಳು ಮತ್ತು ಸಂಸ್ಥೆಗಳ ಕೈವಾಡವಿರುವ ಸಾಧ್ಯತೆಯ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿದ್ದು, ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತನಿಖೆಯನ್ನು ರಾಷ್ಟ್ರೀಯ ಸಂಸ್ಥೆಗಳಿಗೆ ವಹಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಆರೋಪಗಳು ಮತ್ತು ಅಪಪ್ರಚಾರದ ಹಿಂದೆ ವಿದೇಶಿ ಕೈವಾಡವಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
ಹಿಂದೂ ಧಾರ್ಮಿಕ ಕೇಂದ್ರಗಳನ್ನು ವಿದೇಶಿ ಹಿತಾಸಕ್ತಿಗಳು ಗುರಿಯಾಗಿಸಿಕೊಂಡಿವೆ ಎಂದು ಕೆಲವು ವಲಯಗಳು ಆರೋಪಿಸಿವೆ. ಈ ಹೋರಾಟವು ಒಂದು ಬುರುಡೆ ಕೇಸ್‌ನ ಭಾಗವಾಗಿದ್ದು, ವಿದೇಶಿ ವ್ಯೂಹದ ಟಾರ್ಗೆಟ್ ಆಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.