ಸುಳ್ಳಿನ ಷಡ್ಯಂತ್ರ: ಸುಜಾತಾ ವಿರುದ್ಧ ತಿರುಗಿಬಿದ್ದ ವಸಂತಿ ಕುಟುಂಬಸ್ಥರು!

ಧರ್ಮಸ್ಥಳದಲ್ಲಿ ಹೆಣಗಳನ್ನ ಹೂತಿದ್ದ ಮನುಷ್ಯನನ್ನ ನಾವು ಮಾತನ್ನಾಡಿಸಿದ್ದೇವೆ. ಹಾಗಾದ್ರೆ ಆ ಅನಾಮಿಕನ ಗೆಳೆಯ ಹೇಳಿದ್ದೇನು..? ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಸುಳ್ಳಿನ ಷಡ್ಯಂತರದ ಮುಂದುವರೆದ ಭಾಗವೇ ಇವತ್ತಿನ ಎಫ್​.ಐ.ಆರ್​​.

Share this Video
  • FB
  • Linkdin
  • Whatsapp

ನನ್ನ ಮಗಳನ್ನ ಹುಡುಕಿಕೊಡಿ ಅಂತ ಕಣ್ಣೀರು ಹಾಕೊಂಡು ಬಂದಿದ್ದ ಐನಾತಿ ಅಜ್ಜಿಯ ನಿಜ ಬಣ್ಣವನ್ನ ನಿಮ್ಮದೇ ಸುವರ್ಣನ್ಯೂಸ್​​​ ಬಯಲು ಮಾಡ್ತಿದೆ. ಆಕೆ ಮತ್ತು ಆಕೆಯ ಗ್ಯಾಂಗ್​ ಮಾಡುತ್ತಿರುವ ಪ್ರತೀ ಪ್ಲಾನ್​ಗಳನ್ನ ನಾವು ಉಲ್ಟಾ ಮಾಡುತ್ತಿದ್ದೇವೆ. ಇವತ್ತು ಕೂಡ ಆಕೆಯ ಬೊಟ್ಟಿನ ಕಥೆಗೆ ಮತ್ತೊಂದು ಕೌಂಟರ್​ ಕೊಟ್ಟಿದ್ದೇವೆ. ಅಷ್ಟೇ ಅಲ್ಲ ಬುರುಡೆ ಹಿಡಿದು ಬಂದಿದ್ದ ಅನಾಮಿಕನ ಬಗ್ಗೆಯೂ ಹೊಸ ಮಾಹಿತಿಗಳನ್ನ ಹೊರತಗೆದಿದ್ದೇವೆ. ಆತನ ಜೊತೆಯೇ ಧರ್ಮಸ್ಥಳದಲ್ಲಿ ಹೆಣಗಳನ್ನ ಹೂತಿದ್ದ ಮನುಷ್ಯನನ್ನ ನಾವು ಮಾತನ್ನಾಡಿಸಿದ್ದೇವೆ. ಹಾಗಾದ್ರೆ ಆ ಅನಾಮಿಕನ ಗೆಳೆಯ ಹೇಳಿದ್ದೇನು..?

ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಸುಳ್ಳಿನ ಷಡ್ಯಂತರದ ಮುಂದುವರೆದ ಭಾಗವೇ ಇವತ್ತಿನ ಎಫ್​.ಐ.ಆರ್​​. ಈಕೆ ಮಾತ್ರ ಅದು ನನ್ನ ಮಗಳೇ ಅಂತಿದ್ದಾರೆ. ಆದ್ರೆ ವಸಂತಿ ಕುಟುಂಬ ಮಾತ್ರ ಈಕೆಯದ್ದು ಬರೇ ನಾಟಕ. ನನ್ನ ತಂಗಿ ಅವರ ಮಗಳು ಹೇಗಾಗುತ್ತಾರೆ ಅಂತ ಪ್ರಶ್ನಿಸುತ್ತಿದ್ದಾರೆ. ಯಾರದ್ದೋ ಮನೆಯ ಮಗಳ ಫೋಟೋ ತಂದು ನನ್ನ ಮಗಳು ಅಂದ್ರೆ ಯಾರು ಸುಮ್ಮನಿರ್ತಾರೆ ವೀಕ್ಷಕರೇ. ಇದು ಒಂದು ಕಡೆಯಾದ್ರೆ ಅತ್ತ ಧರ್ಮಸ್ಥಳ ಕಾಡಿನಲ್ಲಿ ನೂರಾರು ಶವಗಳನ್ನ ಹೂತು ಹಾಕಿದ್ದೆನೆ ಅಂತ ಬಂದಿದ್ದಾನಲ್ಲ. ಆ ಅನಾಮಿಕ. ಆತನ ಬಗ್ಗೆಯೂ ಒಂದು ಸ್ಫೋಟಕ ಮಾಹಿತಿಯನ್ನ ಕಲೆ ಹಾಕಿದ್ದೇವೆ.

ಆತ ಅನಾಮಿಕನೊಟ್ಟಿಗೇ ಧರ್ಮಸ್ಥಳದಲ್ಲಿ ಕೆಲಸ ಮಾಡಿಕೊಂಡಿದ್ದವನು. ಆರುವರೆ ಸಾವಿರ ಸಂಬಳಕ್ಕೆ ಅವರಿಬ್ಬರೂ ಸ್ವಚ್ಛತಾ ಕೆಲಸ ಮಾಡುತ್ತಿದ್ರು. ಪಕ್ಕದ ಮನೆಯವನೇ. ಆದ್ರೆ ಧರ್ಮಸ್ಥಳದಲ್ಲಿ ಯಾವುದೇ ಮೃತದೇಹ ಸಿಕ್ಕಿದ್ರೂ ಒಟ್ಟಿಗೇ ಮಣ್ಣು ಮಾಡುತ್ತಿದ್ರು. ಆದ್ರೆ ಇವತ್ತು ಅನಾಮಿಕ ಬಂದು ಬೇರೆಯದ್ದೇ ಕಥೆ ಹೇಳ್ತಿದ್ದಾನೆ ಅನ್ನೋದು ಗೆಳೆಯನ ಆರೋಪ. ಧರ್ಮಸ್ಥಳದ ಅನ್ನ ತಿಂದು ಆತ ಹೀಗೆ ಮಾಡಬಾರದಿತ್ತು ಅನ್ನೋದೊಂದೇ ಅವನ ಸಿಟ್ಟು. ಕೊನೆಗೂ ಬುರುಡೆ ಬಂಡವಾಳ ಬಯಲಾಗುತ್ತಿದೆ. ಸುಳ್ಳಿನ ಕಾರ್ಮೋಡ ಸರಿದು ಸತ್ಯ ಬೆಳಕಿಗೆ ಬರುತ್ತಿದೆ. ಸಂಚಿನ ಸೂತ್ರಧಾರಿಗಳಿಗೆಲ್ಲ ನಡುಕ ಹುಟ್ಟಿದೆ. ಕಟ್ಟುಕಥೆಗಳ ಮೂಲಕ ಲಕ್ಷಾಂತರ ಹಿಂದೂಗಳ ಧಾರ್ಮಿಕ ಶ್ರದ್ಧೆ ಕದಡಿದ ಸಂಚುಕೋರರ ಕೊರಳಿಗೆ ಕಾನೂನು ಕುಣಿಕೆ ಬೀಳಲೇಬೇಕಿದೆ.

Related Video