ಧರ್ಮದ ನಾಡು ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆ!

ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಮಾತಿದೆ. ಸದಾ ಧಾರ್ಮಿಕ ಕಾಯಕಗಳಿಂದ ಪ್ರಸಿದ್ಧಿ ಪಡೆದಿರುವ ಶ್ರೀಕ್ಷೇತ್ರ ಧರ್ಮಸ್ಥಳ ಇದೀಗ ಮತ್ತೊಂದು ಐತಿಹಾಸಿಕ ಧರ್ಮ ಸಂರಕ್ಷಣಾ ಯಾತ್ರೆಗೆ ಸಜ್ಜಾಗುತ್ತಿದೆ. 
 

First Published Oct 29, 2023, 10:25 AM IST | Last Updated Oct 29, 2023, 10:25 AM IST

ಧರ್ಮ ಸಂರಕ್ಷಣೆಯ ಪಣ ತೊಟ್ಟ ಧರ್ಮ ಸೈನಿಕರು ಮಂಜುನಾಥನ ಸನ್ನಿಧಿಗೆ ಪಾದಯಾತ್ರೆ ನಡೆಸಿ ಈ ಮಣ್ಣಿನ ಕೀರ್ತಿಯ ರಕ್ಷಣೆಗೆ ಪಣ ತೊಟ್ಟಿದ್ದಾರೆ. ರಥಯಾತ್ರೆ ಮೂಲಕ ಕ್ಷೇತ್ರದ ಧರ್ಮ ರಕ್ಷಣೆಯ ಕಹಳೆ ಸಾವಿರಾರು ಸಂಖ್ಯೆಯಲ್ಲಿ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಂದೇಶ ಮೊಳಗಲಿದೆ. ಶ್ರೀ ವೀರೇಂದ್ರ ಹೆಗ್ಗಡೆಯವರು(Veerendra Heggade) ಈ ರಥಯಾತ್ರೆಯನ್ನ ಸ್ವಾಗತಿಸಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕೆಯ(Sri Mookambike) ಸನ್ನಿಧಿಯಿಂದ ಹೊರಟಿರುವ ಧರ್ಮ ಸಂರಕ್ಷಣಾ ರಥವೂ(Dharma Samrakshana Ratha ಇಂದು ಪೊಡವಿಗೋಡೆಯನ ಊರು ಶ್ರೀ ಕೃಷ್ಣನಗರಿ ಉಡುಪಿಯನ್ನ ತಲುಪಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತ ಸ್ತೋಮದಿಂದ ಧರ್ಮ ಸಂರಕ್ಷಣ ರಥಕ್ಕೆ ಅಭೂತಪೂರ್ವ ಸ್ವಾಗತ ದೊರೆತಿದೆ. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮಹಿಳಾ ಭಕ್ತಾದಿಗಳು ಆರತಿ ಎತ್ತುವ ಮೂಲಕ ಧರ್ಮ ರಥವನ್ನ ಸ್ವಾಗತಿಸಿದ್ದಾರೆ. ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಿಂದ (Manjunath Swamy Temple)ಹೊರಟು ಮಧ್ಯಾಹ್ನ 1:30ಕ್ಕೆ ಉಜಿರೆ ತಲುಪಲಿದ್ದು, ಬಳಿಕ 3 ಗಂಟೆಗೆ ಉಜಿರೆಯಿಂದ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಪಾದಯಾತ್ರೆಯ ಮೂಲಕ ಸಂಜೆ 5 ಗಂಟೆ ಸುಮಾರಿಗೆ ಧರ್ಮಸ್ಥಳ ತಲುಪಲಿದೆ. ಈ ಧರ್ಮ ಸಂರಕ್ಷಣಾ ಪಾದಯಾತ್ರೆಯಲ್ಲಿ ನಾಡಿನ ಪ್ರಸಿದ್ಧ ಸಂತರು, ಜನಪ್ರತಿನಿಧಿಗಳು ಸೇರಿದಂತೆ ಹಲವು ಜನರು ಭಾಗಿಯಾಗಲಿದ್ದಾರೆ. ನಾಡಿನ ವಿವಿಧ ಭಾಗಗಳಿಂದ ಭಕ್ತ ಸ್ತೋಮವೇ ಧರ್ಮ ಸಂರಕ್ಷಣೆಯ ಯಾತ್ರೆಗೆ ಸಜ್ಜಾಗುತ್ತಿದ್ದು ಧರ್ಮಸ್ಥಳದಲ್ಲಿ ನಡೆಯುವ ಈ ರಥ ಯಾತ್ರೆ ಸಾಕಷ್ಟು ನಿರೀಕ್ಷೆ ಕುತೂಹಲಗಳನ್ನ ಸೃಷ್ಟಿಸಿದೆ.

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರಿಗೆ ಪ್ರೇಮದ ವಿಚಾರದಲ್ಲಿ ಬೇಸರವಾಗಲಿದ್ದು, 12 ರಾಶಿಗಳ ಭವಿಷ್ಯ ಹೀಗಿದೆ..

Video Top Stories