ಕೊರೋನಾ ಸಾವಿನ ಸಂಕೋಲೆ: ರಾಜ್ಯವೇ ಬೆಚ್ಚಿ ಬೀಳಿಸುವಂತ ಸುದ್ದಿ..!

* ದೇಶದ 98 ಜಿಲ್ಲೆಗಳ ಪೈಕಿ ರಾಜ್ಯದ 6 ಜಿಲ್ಲೆಗಳು ಡೇಂಜರ್
* ಮೇ.5 ರಿಂದ ಜೂ. 2 ರವರೆಗೆ ಮರಣ ಪ್ರಮಾಣದಲ್ಲಿ ಏರಿಕೆ
* 6 ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 3280 ಮಂದಿ ಸಾವು

First Published Jun 10, 2021, 9:03 AM IST | Last Updated Jun 10, 2021, 12:04 PM IST

ಬೆಂಗಳೂರು(ಜೂ.10): ದೇಶಾದ್ಯಂತ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ದೇಶದಲ್ಲಿ ಕೊರೋನಾ ಮರಣ ಕೇಕೆ ಮುಂದುವರೆದಿದೆ. ದೇಶದ 98 ಜಿಲ್ಲೆಗಳು ಹಾಗೂ ರಾಜ್ಯದ 6  ಜಿಲ್ಲೆಗಳು ಡೇಂಜರ್‌ ಝೋನ್‌ನಲ್ಲಿವೆ. ಮೇ.5 ರಿಂದ ಜೂ. 2 ರವರೆಗೆ ಮರಣ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಕೊಡಗು, ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಕೊರೋನಾ ರಣಕೇಕೆ ಮುಂದುವರೆಸಿದೆ.ಈ 6 ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 3280 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. 

3ನೇ ಅಲೆಗೂ ಮುನ್ನ ಕವಾಸಾಕಿಯಿಂದ ಮಕ್ಕಳ ರಕ್ಷಣೆ  ಹೇಗೆ?