ಬೆಂಗಳೂರು : ಫ್ಲ್ಯಾಟ್‌ನಲ್ಲಿ ಬೆಂಕಿ ಅವಘಢ, ತಾಯಿ- ಮಗಳು ಸಜೀವ ದಹನ

ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ತಾಯಿ-ಮಗಳು ಸಜೀವ ದಹನಗೊಂಡ ಘಟನೆ ಬೆಂಗಳೂರಿನ ಬನ್ನೇರುಘಟ್ಟರಸ್ತೆಯ ದೇವರ ಚಿಕ್ಕನಹಳ್ಳಿಯಲ್ಲಿ ಸಂಭವಿಸಿದ್ದು, ಎರಡು ಜೀವಗಳು ಸಜೀವವಾಗಿ ದಹನಗೊಂಡಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 22): ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ತಾಯಿ-ಮಗಳು ಸಜೀವ ದಹನಗೊಂಡ ಘಟನೆ ಬೆಂಗಳೂರಿನ ಬನ್ನೇರುಘಟ್ಟರಸ್ತೆಯ ದೇವರ ಚಿಕ್ಕನಹಳ್ಳಿಯಲ್ಲಿ ಸಂಭವಿಸಿದ್ದು, ಎರಡು ಜೀವಗಳು ಸಜೀವವಾಗಿ ದಹನಗೊಂಡಿದೆ. ದೇವರ ಚಿಕ್ಕನಹಳ್ಳಿ ನಿವಾಸಿ ಲಕ್ಷ್ಮೇದೇವಿ (82) ಹಾಗೂ ಇವರ ಪುತ್ರಿ ಭಾಗ್ಯರೇಖಾ (59) ಸಜೀವ ದಹನಗೊಂಡವರು. 

ಬೆಂಗಳೂರು: ಬಿಟಿಎಂನಲ್ಲಿ ಅಗ್ನಿ ದುರಂತ, ನೋಡ ನೋಡತ್ತಿದ್ದಂತೆ ಮಹಿಳೆಯರು ಭಸ್ಮ

ಭೀಮಸೇನ್‌ ಅವರು ಪತ್ನಿ ಭಾಗ್ಯರೇಖಾ ಹಾಗೂ ಅತ್ತೆ ಲಕ್ಷ್ಮೇದೇವಿ ಅವರೊಂದಿಗೆ ಮೂರನೇ ಅಂತಸ್ತಿನ 210 ಸಂಖ್ಯೆಯ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಪುತ್ರಿ ಪ್ರೀತಿ ಮತ್ತು ಅಳಿಯ ಸಂದೀಪ್‌ ಅಮೆರಿಕದಲ್ಲಿ ನೆಲೆಸಿದ್ದರಿಂದ ಅಳಿಯನ ಫ್ಲ್ಯಾಟನ್ನು ಕೂಡ ಭೀಮಸೇನ್‌ ಅವರೇ ಉಪಯೋಗಿಸುತ್ತಿದ್ದರು. ಆರು ತಿಂಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದ ಭೀಮಸೇನ್‌ ದಂಪತಿ ಸೋಮವಾರ ತಡರಾತ್ರಿಯಷ್ಟೇ ಬೆಂಗಳೂರಿಗೆ ವಾಪಸ್‌ ಆಗಿದ್ದರು. 

Related Video