416ನೇ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಜನವೋ ಜನ..ಅರಮನೆಯಲ್ಲಿ ಹೇಗಿತ್ತು ಗೊತ್ತಾ ಖಾಸಗಿ ದರ್ಬಾರ್ ?
ಮೊದಲ ದಿನ ಅರಮನೆಯಲ್ಲಿ ಹೇಗಿತ್ತು ಗೊತ್ತಾ ಖಾಸಗಿ ದರ್ಬಾರ್
ಯದುವೀರ್ ಪಾದಗಳಿಗೆ ಪುಷ್ಪಾರ್ಚನೆ ಮಾಡಿದ ತ್ರಿಷಿಕಾ ಕುಮಾರಿ
ಚಾಮುಂಡಿ ದೇವಿಗೆ ರಾಜವಂಶಸ್ಥ ಯದುವೀರ್ ವಿಶೇಷ ಪೂಜೆ..!
ಮೈಸೂರು ದಸರಾ.. ಎಷ್ಟೊಂದು ಸುಂದರ. ಈ ಮಾತು ಅಕ್ಷರಶಃ ನಿಜ. ಮೈಸೂರು ದಸರಾ (Mysore dasara) ವೈಭವವೇ ಹಾಗಿರುತ್ತೆ. 2023ರ ದಸರಾಗೆ ಭಾನುವಾರ ಅಧಿಕೃತ ಚಾಲನೆ ಸಿಕ್ಕಿದ್ದಾಗಿದೆ. ಇದೇ ಸಂದರ್ಭದಲ್ಲಿ ಖಾಸಗಿ ದರ್ಬಾರ್(Private Darbar) ಕೂಡ ಶುರುವಾಗಿದ್ದಾಗಿದೆ. ಅಷ್ಟಕ್ಕೂ ಈ ಖಾಸಗಿ ದರ್ಬಾರ್ ನಡೆಸೋರು ಯಾರು..? ಈ ದರ್ಬಾರ್ ಯಾವ ಯಾವ ವಿಶೇಷತೆಗಳಿಂದ ಕೂಡಿರಲಿದೆ. ಖಾಸಗಿ ದರ್ಬಾರ್ ಹೊರತು ಪಡೆಸಿ, ದಸರಾ ಮೊದಲ ದಿನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಗಿದೆ. 416ನೇ ದಸರಾ ಹಬ್ಬಕ್ಕೆ ನಾದಬ್ರಹ್ಮ ಹಂಸಲೇಖ(Hamsalekha), ಅವರಿಂದ ಚಾಲನೆ ಸಿಕ್ಕಿದೆ. ಇದೇ ದಸರಾದಂದು ಅರಮನೆ ನಗರಿಯಲ್ಲಿ ಇನ್ನೂ ಹಲವು ವಿಶೇಷ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಯಮ್ಮ(Siddaramaiah) ಹಾಗೂ ಡಿಸಿಎಂ ಡಿಕೆಶಿಯವರು(dk shivakumar) ಚಾಲನೆ ಕೊಟ್ಟಿದ್ದಾರೆ. ಕೇವಲ ಮೈಸೂರಿನಲ್ಲಿ ಮಾತ್ರ ಅಲ್ಲ, ರಾಜ್ಯದ ಇನ್ನೂ ಅನೇಕ ಜಿಲ್ಲೆಗಳಲ್ಲಿ ದಸರಾವನ್ನ ವಿಜೃಂಭಣೆಯಿಂದ ಆಚರಿಸಲಾಗಿತ್ತಿದೆ. ಮೈಸೂರಲ್ಲಿ ಮಾತ್ರವಲ್ಲ ಕರುನಾಡಿನ ಹಲವೆಡೆ ದಸರಾವನ್ನು ವಿಶಿಷ್ಚವಾಗಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕೆಲ ಆಚರಣೆಗಳಿಗೆ ನೂರಾರು ವರ್ಷಗಳ ಇತಿಹಾಸ ಇದ್ದರೆ, ಇನ್ನು ಕೆಲವೆಡೆ ಕಳೆದ ಹತ್ತೈವತ್ತು ವರ್ಷಗಳಿಂದ ದಸರಾ ಆಚರಣೆ ಚಾಲ್ತಿಗೆ ಬಂದಿದೆ.
ಇದನ್ನೂ ವೀಕ್ಷಿಸಿ: 9ನೇ ಬಾರಿ ಯದುವೀರ್ ಖಾಸಗಿ ದರ್ಬಾರ್ : ಬಾಲ್ಯ ದಿನದ ದಸರಾ ನೆನಪು ಹಂಚಿಕೊಂಡ ಮೈಸೂರು ರಾಜ