Asianet Suvarna News Asianet Suvarna News

ಒಂಟಿತನದ ಜತೆ ಶುರುವಾಗಿದೆಯಂತೆ ಕಿಲ್ಲಿಂಗ್‌ ಸ್ಟಾರ್‌ಗೆ ಕೈ-ಕಾಲುಗಳ ನಡುಕ!

ಪರಪ್ಪನ ಅಗ್ರಹಾರ ಜೈಲಿನಲ್ಲಿ ದೌಲತ್ತಿನಲ್ಲಿದ್ದ ನಟ ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ನಿಜ ಜೈಲಿನ ಅನುಭವ ಆಗುತ್ತಿದೆ. ಜೈಲಿನ 2ನೇ ದಿನವೂ ಅವರು ಸಂಪೂರ್ಣ ಸೈಲೆಂಟ್‌ ಆಗಿದ್ದಾರೆ.
 

First Published Aug 31, 2024, 11:23 PM IST | Last Updated Aug 31, 2024, 11:23 PM IST


ಬೆಂಗಳೂರು (ಆ.31): ಬಳ್ಳಾರಿಯಲ್ಲಿ ಜೈಲಿನಲ್ಲಿ 2ನೇ ದಿನವೂ ದರ್ಶನ್ ಸೈಲೆಂಟ್ ಆಗಿದ್ದಾರೆ. ಐಷಾರಾಮಿ ಜೀವನ ನಡೆಸಿದ್ದ ದರ್ಶನ್ ದೌಲತ್ತಿಗೆ ಬ್ರೇಕ್ ಬಿದ್ದಿದೆ. ಯಾರೊಂದಿಗೂ ಮಾತಿಲ್ಲ..ಕಥೆಯಿಲ್ಲ.. ಪುಸ್ತಕವೇ ಸಂಗಾತಿಯಾಗಿದೆ.

ಜೈಲಿನಲ್ಲಿ 2ನೇ ದಿನವೂ ನಿದ್ದೆ ಇಲ್ಲದೇ ದರ್ಶನ್‌ ಒದ್ದಾಟ ಮಾಡಿದ್ದಾರೆ. 10x 8 ಹೈ ಸೆಕ್ಯೂರಿಟಿ ಸೆಲ್​​​ 15ನೇ ಕೋಣೆಯಲ್ಲಿ ಅವರು ಬಂಧಿಯಾಗಿದ್ದಾರೆ. ಬಳ್ಳಾರಿ ಜೈಲ್ ರೂಲ್ಸ್​​ ಕೇಳಿಯೇ ಕಿಲ್ಲಿಂಗ್​ ಸ್ಟಾರ್​​ಗೆ ಶಾಕ್ ಆಗಿದೆ. ದರ್ಶನ್​ಗೆ ಬೆಂಗಳೂರಿನಂತೆ ಬಳ್ಳಾರಿಯಲ್ಲಿ ರಾಜಾತಿಥ್ಯ ಸಿಕ್ಕಿಲ್ಲ.

ದರ್ಶನ್ ಕೈಗೆ ಕೋಳ ಹಾಕಿದ್ರೂ ಕಣ್ಣಿಗೆ ಮಾತ್ರ ಕೂಲಿಂಗ್ ಗ್ಲಾಸು; ಬೆಂಗಾವಲು ಪಡೆಗೆ ಕೊಟ್ರು ನೋಟೀಸು!

ಒಂಟಿತನದ ಜತೆ ಕೈ-ಕಾಲುಗಳ ನಡುಕ ಶುರುವಾಗಿದೆ. ಕೈ ನಡುಕ, ಬಾಯಿ ಚಡಪಡಿಕೆಯಿಂದ ದರ್ಶನ್​​ ಪರದಾಟ ನಡೆಸಿದ್ದಾರೆ. ದರ್ಶನ್ ಸ್ಥಿತಿ ನೋಡಿ ವೈದ್ಯರ ಸಲಹೆ ಪಡೆಯಲು ಜೈಲು ಸಿಬ್ಬಂದಿ ಚಿಂತನೆ ನಡೆಸಿದ್ದಾರೆ. ಸಿಗರೇಟ್​​ ಇಲ್ದೇ ದರ್ಶನ್​​ ಕಂಗಾಲಾದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.

Video Top Stories