Chitradurga:ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದೇಶದ ಜನ ಅಧಿಕಾರಕ್ಕೆ ಬಂದಂತೆ: ಡಿ.ಕೆ. ಶಿವಕುಮಾರ್
ಶೋಷಿತರ ಜಾಗೃತಿ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಇದೊಂದು ಐತಿಹಾಸಿಕ ಸಮಾವೇಶ ಎಂದು ಹೇಳಿದರು.
ಚಿತ್ರದುರ್ಗ: ಜಿಲ್ಲೆಯಲ್ಲಿ ಶೋಷಿತರ ಜಾಗೃತಿ ಸಮಾವೇಶ (Shoshitara Jagruthi Samavesha)ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ(Siddaramaiah) ಜೊತೆ ಡಿಕೆ ಶಿವಕುಮಾರ್ , ಜಮೀರ್ ಬೈರತಿ ಸುರೇಶ್ ಆಗಮಿಸಿದ್ದಾರೆ. ವೇದಿಕೆ ಮುನ್ನ ಮಾದಾರ ಚನ್ನಯ್ಯಪೀಠ , ಬೋವಿಪೀಠಕ್ಕೆ ಸಹ ಸಿಎಂ ಭೇಟಿ ನೀಡಿದ್ರು. ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್(D.K. Shivakumar) ಮಾತನಾಡಿ, ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ ಅವಕಾಶ ಮಾತ್ರ ಕೊಡ್ತಾನೆ. ಅವಕಾಶ ಯಾವ ರೀತಿ ಉಪಯೋಗಿಸಿಕೊಳ್ತೀವಿ ಎಂಬುದು ಬಹಳ ಮುಖ್ಯವಾಗಿದೆ. ಯಶಸ್ಸು ಯಾರ ಆಸ್ತಿ ಅಲ್ಲ. ಯಾವ ರಾಜನೂ ಯಾವಾಗ್ಲೂ ರಾಜನಾಗಿ ಇರಲು ಸಾಧ್ಯವಿಲ್ಲ. ಕೊನೆಗೆ ಎಲ್ಲರಿಗೂ ರಾಜನಾಗುವ, ಶ್ರೀಮಂತನಾಗುವ ಅವಕಾಶ ಸಿಗುತ್ತೆ. ಇದೇ ಪ್ರಜಾಪ್ರಭುತ್ವದ ಶಕ್ತಿ. ಭಗವದ್ಗೀತೆ, ರಾಮಾಯಣ ಇದು ಧರ್ಮಗಳ ಗ್ರಂಥ. ಅಂಬೇಡ್ಕರ್ ಅವರ ಸಂವಿಧಾನವೇ ನಮಗೆ ಶ್ರೀರಕ್ಷೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ವೀಕ್ಷಿಸಿ: ಇಂಡಿಯಾ ಮೈತ್ರಿಕೂಟ ಛಿದ್ರವಾಗಿದೆ, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತೆ: ಬಿಎಸ್‌ವೈ