Asianet Suvarna News Asianet Suvarna News

News Hour: ಡಿಜೆ ಹಳ್ಳಿ, ಕೆಜಿ ಹಳ್ಳಿ ನೆನಪಿಸಿದ ಚನ್ನಗಿರಿ ಗಲಭೆ , ಪೊಲೀಸರ ಮೇಲೆ ಪುಂಡರ ದಾಳಿ!

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ರೀತಿಯಲ್ಲೇ ದಾವಣಗೆರೆಯ ಚನ್ನಗಿರಿಯಲ್ಲಿ ಗಲಭೆಯಾಗಿದೆ. ಲಾಕಪ್ ಡೆತ್​ ಅನುಮಾನಕ್ಕೆ ಪೊಲೀಸ್ ಠಾಣೆಯೇ ಟಾರ್ಗೆಟ್ ಆಗಿದೆ. ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಲ್ಲದೆ, ಪೊಲೀಸ್‌ ವಾಹನವನ್ನು ಜಖಂ ಮಾಡಿದ್ದಾರೆ.
 

ಬೆಂಗಳೂರು (ಮೇ.25):  ಡಿಜೆ ಹಳ್ಳಿ,ಕೆಜೆಹಳ್ಳಿ ದಂಗೆ ಮಾದರಿಯಲ್ಲೇ ಚನ್ನಗಿರಿಯಲ್ಲಿ ಗಲಭೆ ನಡೆದಿದೆ. ಲಾಕಪ್​ ಡೆತ್​ ಆರೋಪಕ್ಕೆ ಚನ್ನಗಿರಿ ಪೊಲೀಸ್ ಠಾಣೆ ರಣಾಂಗಣವಾಗಿದೆ. ಪೊಲೀಸ್ ವಶದಲ್ಲಿದ್ದಾಗ ಆರೋಪಿ ಸಾವು ಕಂಡಿದ್ದಕ್ಕೆ, ಪುಂಡರು ಅಟ್ಟಹಾಸ ಮೆರೆದಿದ್ದಾರೆ.

ಇನ್ನು ಚನ್ನಗಿರಿ ಆದಿಲ್ ಸಾವಿನ ಬಗ್ಗೆ ಕುಟುಂಬಸ್ಥರಲ್ಲೇ ಗೊಂದಲ ಉಂಟಾಗಿದೆ. ಬೆಳಗ್ಗೆ ಲೋ ಬಿಪಿಯಿಂದ ಸಾವು ಎಂದಿದ್ದ ತಂದೆ, ಮಧ್ಯಾಹ್ನ ಲಾಕಪ್ ಡೆತ್ ಎಂದು ಹೇಳಿದ್ದಾರೆ. ಮೂರ್ಚೆ ರೋಗದಿಂದ ಸಾವು ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

ಆದಿಲ್ ಸಾವು ಲಾಕಪ್‌ಡೆತ್‌ ಅಲ್ಲ, ಆತನಿಗೆ ಮೂರ್ಛೆ ರೋಗ ಇತ್ತು: ಸಿಎಂ ಸಿದ್ದರಾಮಯ್ಯ

ಪೊಲೀಸ್‌ ಜೀಪ್ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲು ಉದ್ರಿಕ್ತರ ಯತ್ನ ನಡೆಸಿದ್ದಾರೆ. ಬೆಂಕಿ ಹಚ್ಚಲು ಮುಂದಾಗ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಡಿ.ಜೆ ಹಳ್ಳಿ & ಕೆ.ಜೆ ಹಳ್ಳಿ ದಂಗೆ ರೀತಿಯಲ್ಲೇ ಚೆನ್ನಗರಿಯಲ್ಲಿ ದಂಗೆ ನಡೆದಿದೆ.

Video Top Stories