ಆದಿಲ್ ಸಾವು ಲಾಕಪ್‌ಡೆತ್ ಅಲ್ಲ, ಆತನಿಗೆ ಮೂರ್ಛೆ ರೋಗ ಇತ್ತು: ಸಿಎಂ ಸಿದ್ದರಾಮಯ್ಯ
ಮೃತ ಆದಿಲ್‌ಗೆ ಮೂರ್ಛೆ ರೋಗ ಇತ್ತು. ಆತನನ್ನು ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಿಸದೇ ಯುವಕ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚನ್ನಗಿರಿ ಯುವಕನದ್ದು ಲಾಕಪ್‌ಡೆತ್(Lockup Death) ಎಂಬ ಆರೋಪ ಕೇಳಿಬಂದಿದ್ದು, ಇದನ್ನು ಸಿಎಂ ಸಿದ್ದರಾಮಯ್ಯ(Siddaramaiah)ಅಲ್ಲಗೆಳೆದಿದ್ದಾರೆ. ಆದಿಲ್ ಸಾವು(Adil died) ಲಾಕಪ್‌ಡೆತ್ ಅಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮೃತ ಆದಿಲ್‌ಗೆ ಮೂರ್ಛೆ ರೋಗ ಇತ್ತು. ಆತನನ್ನು ಆಸ್ಪತ್ರೆಗೆ ಪೊಲೀಸರು(Channagiri Police Station) ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಿಸದೇ ಯುವಕ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಇದು ಲಾಕಪ್ ಡೆತ್ ಅಲ್ಲ. ತನಿಖೆ ನಡೆಯುತ್ತಿದ್ದು, ವರದಿ ಬಳಿಕ ಸತ್ಯಾಂಶ ಗೊತ್ತಾಗಲಿದೆ. FIR ದಾಖಲಿಸದೇ ಆರೋಪಿಯನ್ನು ಕರೆತಂದಿದ್ದು ತಪ್ಪು. FIR ಮಾಡದೇ ಠಾಣೆಯಲ್ಲಿ ಯಾಕೆ ಕೂರಿಸಿಕೊಂಡಿದ್ದರು?. ಪೊಲೀಸರು ವಿಚಾರಣೆ ಮಾಡಿ ಆತನನ್ನು ಕಳುಹಿಸಬೇಕಿತ್ತು. ಈ ರೀತಿ ಮಾಡದಿರುವ ಕಾರಣಕ್ಕೆ ಸಸ್ಪೆಂಡ್ ಮಾಡಲಾಗಿದೆ. ಡಿವೈಎಸ್ಪಿ,ಇನ್ ಸ್ಪೆಕ್ಟರ್ ಅಮಾನತಿಗೆ ಆದೇಶಿಸಿದ್ದೇನೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವು! ಠಾಣೆಯನ್ನು ಧ್ವಂಸ ಮಾಡಿದ ಸಂಬಂಧಿಕರು!