Asianet Suvarna News Asianet Suvarna News

ಕೊರೋನಾ ಭೀತಿ: ಕಬ್ಬನ್‌ ಪಾರ್ಕ್ ಪೊಲೀಸ್ ಠಾಣೆ ಸೀಲ್‌ಡೌನ್..!

ಈಗಾಗಲೇ ರಾಜ್ಯದ ಹಲವು ಪೊಲೀಸ್‌ ಠಾಣೆಗಳು ಕೊರೋನಾ ಭೀತಿಯಿಂದಾಗಿ ಸೀಲ್‌ಡೌನ್ ಆಗಿದೆ. ಇದೀಗ ಆ ಪಟ್ಟಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಸೇರ್ಪಡೆಯಾಗಿದೆ. ಈಗಾಗಲೇ ನಗರದ 39ಕ್ಕೂ ಅಧಿಕ ಪೊಲೀಸರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೆಂಗಳೂರು(ಜೂ.20): ನಗರದಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರನ್ನು ಕೊರೋನಾ ಸೋಂಕು ಇನ್ನಿಲ್ಲದಂತೆ ಕಾಡಲಾರಂಭಿಸಿದೆ. ಇದೀಗ ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. 

ಈಗಾಗಲೇ ರಾಜ್ಯದ ಹಲವು ಪೊಲೀಸ್‌ ಠಾಣೆಗಳು ಕೊರೋನಾ ಭೀತಿಯಿಂದಾಗಿ ಸೀಲ್‌ಡೌನ್ ಆಗಿದೆ. ಇದೀಗ ಆ ಪಟ್ಟಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಸೇರ್ಪಡೆಯಾಗಿದೆ. ಈಗಾಗಲೇ ನಗರದ 39ಕ್ಕೂ ಅಧಿಕ ಪೊಲೀಸರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಭಾನುವಾರ ಕಂಕಣ ಸೂರ್ಯಗ್ರಹಣ, ಅವಧಿ ಮುಗಿದ ಬಿಯರ್‌ನಿಂದ ಹೋಗಲಿದೆ ಪ್ರಾಣ; ಜೂ.20ರ ಟಾಪ್ 10 ಸುದ್ದಿ!

ಬೆಂಗಳೂರಿನಲ್ಲಿ ಮುನ್ನೂರಕ್ಕಿಂತ ಹೆಚ್ಚು ಪೊಲೀಸರು ಕೊರೋನಾ ಭೀತಿಯಿಂದಾಗಿ ಕ್ವಾರಂಟೈನ್‌ನಲ್ಲಿದ್ದಾರೆ. ಶುಕ್ರವಾರವಷ್ಟೇ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗೆ ಕೊರೋನಾ ಕಾಣಿಸಿಕೊಂಡಿತ್ತು. ಹೀಗಾಗಿ ಇಡೀ ಠಾಣೆಯನ್ನೇ ಸೀಲ್‌ಡೌನ್ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories