Asianet Suvarna News Asianet Suvarna News

'ಕಂಬಳಿ ಹಾಕಲು ಕುರುಬರೇ ಆಗಬೇಕು ಅಂತಾದ್ರೆ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ

Oct 27, 2021, 1:36 PM IST

ಬೆಂಗಳೂರು (ಅ. 27): ಬೈ ಎಲೆಕ್ಷನ್ ಅಖಾಡದಲ್ಲಿ ವೈಯಕ್ತಿಕ ನಿಂದನೆ, ವಾಕ್ಸಮರ ಮುಂದುವರೆದಿದೆ. ಸಭ್ಯತೆ ಮೀರಿ, ಅಭಿವೃದ್ಧಿ ಕೆಲಸಗಳನ್ನು ಮರೆತು ಬರೀ ನಿಂದನೆಗಳಲ್ಲೇ ಮುಳುಗಿದ್ದಾರೆ. ಸಿದ್ದರಾಮಯ್ಯ (Siddaramaiah) ಕಂಬಳಿ ಹೇಳಿಕೆಗೆ ಸಿ ಟಿ ರವಿ (CT Ravi) ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ವಿಧಾನಸೌಧದ ಮುಂದೆ ಕಂಬಳಿ ಹೆಣೆಯಲಿ ನೋಡೋಣ: ಎಚ್‌ಡಿಕೆ  

'ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರ ಈ ಹೇಳಿಕೆಗೆ ಎಚ್‌ಡಿಕೆ ಕೂಡಾ ವಾಗ್ದಾಳಿ ನಡೆಸಿದ್ದಾರೆ. ' ಸಿದ್ದರಾಮಯ್ಯನವರು ಯಾವತ್ತಾದ್ರೂ ಕಂಬಳಿ ಹೆಣೆದಿದ್ದೀರಾ.? ವಿಧಾನಸೌದದ ಎದುರು ಹೆಣೆಯಲಿ ನೋಡೋಣ' ಎಂದು ಸವಾಲು ಹಾಕಿದ್ಧಾರೆ.