News Hour: ‘ಅಶ್ಲೀಲ ಪದಬಳಕೆ’... ಸಿಐಡಿ ತನಿಖೆಗೆ..!

ಪ್ರಾಸ್ಟಿಟ್ಯೂಟ್ ಪದಬಳಕೆ ವಿವಾದವು ಸಿಐಡಿ ತನಿಖೆಗೆ ಒಳಪಟ್ಟಿದ್ದು, ಮೈತ್ರಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ದೂರು ನೀಡಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿಟಿ ರವಿ ನಡುವೆ ಆಣೆ-ಪ್ರಮಾಣಗಳ ವಾಗ್ಯುದ್ಧ ನಡೆಯುತ್ತಿದೆ.

First Published Dec 24, 2024, 11:47 PM IST | Last Updated Dec 24, 2024, 11:47 PM IST

ಬೆಂಗಳೂರು (ಡಿ.24): ಪ್ರಾಸ್ಟಿಟ್ಯೂಟ್​​ ಪದಬಳಕೆ ಪ್ರಕರಣ ಸಿಐಡಿ ಹೆಗಲಿಗೇರಿದೆ. ಇದಕ್ಕೆ ಮೈತ್ರಿಪಡೆ ಸಿಡಿದೆದ್ದಿರೆ, ಕಾಂಗ್ರೆಸ್​ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ಆಗಿರುವ ಘಟನೆಗೆ ಸಂಬಂಧಪಟ್ಟಂತೆ ಬಿಜೆಪಿ ನಿಯೋಗ ಇಂದು ರಾಜ್ಯಪಾಲರಿಗೆ ಭೇಟಿ ನೀಡಿ ದೂರು ಸಲ್ಲಿಸಿದೆ. 2 ಸದನಗಳ ವಿಪಕ್ಷ ನಾಯಕರಿಂದ ರಾಜ್ಯಪಾಲರಿಗೆ ದೂರು ಹೋಗಿದೆ.

ನೆಲಮಂಗಲ ಜನರಿಗೆ ಮತ್ತೆ ಕಾಡಿದ 'ನಂಬರ್‌ 6', ಹೆದ್ದಾರಿ ಅಪಘಾತಕ್ಕೂ ನಂಬರ್ ಪ್ಲೇಟ್‌ಗೂ ಏನಿದೆ ಲಿಂಕ್‌?

ಇನ್ನು ಅಶ್ಲೀಲ ಸಂಘರ್ಷದಲ್ಲಿ ಆಣೆ ಪ್ರಮಾಣ ರಾಜಕೀಯ​ವೂ ಜೋರಾಗಿದೆ. ಧರ್ಮಸ್ಥಳಕ್ಕೆ ಬನ್ನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪಂಥಾಹ್ವಾನ ನೀಡಿದ್ದರೆ, ಕೇಸ್​ ದಾಖಲಾದ ಬಳಿಕ ಅಪ್ರಸ್ತುತ ಎಂದು ಸಿಟಿ ರವಿ ತಿರಸ್ಕಾರ ಮಾಡಿದ್ದಾರೆ.