ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಚಂದ್ರಮ್ ಯೇಗಪ್ಪಗೋಳ ಮತ್ತು ಅವರ ಕುಟುಂಬ ಸಾವು ಕಂಡ ಘಟನೆ ನೆಲಮಂಗಲದಲ್ಲಿ '6'ರ ಭೂತದ ಭಯ ಹುಟ್ಟಿಸಿದೆ. ಅಪಘಾತಕ್ಕೀಡಾದ ಕಾರು ಮತ್ತು ಲಾರಿಯ ನಂಬರ್ ಪ್ಲೇಟ್‌ಗಳ ಕೊನೆಯ ಸಂಖ್ಯೆ 6 ಆಗಿದ್ದು, ಹೆದ್ದಾರಿಯಲ್ಲಿ ಕೊನೆಯ ಸಂಖ್ಯೆ 6 ಇರುವ ವಾಹನಗಳಿಗೆ ಅಪಾಯ ಎಂಬ ನಂಬಿಕೆಯನ್ನು ಬಲಪಡಿಸಿದೆ.

ಬೆಂಗಳೂರು (ಡಿ.24): ಒಂದು ಭೀಕರ ಅಪಘಾತ, ಅದಾಗದೇ ಹೋಗಿದ್ದಲ್ಲಿ ಇಂದು ಐಎಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ ಕಂಪನಿಯ ಮಾಲೀಕ ಚಂದ್ರಮ್‌ ಯೇಗಪ್ಪಗೋಳ ತಮ್ಮ ಕುಟುಂಬದ ಜೊತೆ ಕ್ರಿಸ್‌ಮಸ್‌ ರಜೆಯನ್ನು ಹುಟ್ಟೂರು ವಿಜಯಪುರದಲ್ಲಿ ಕಳೆಯುತ್ತಿದ್ದರು. ಆದರೆ, ವಿಧಿಯಾಟ ಅದಕ್ಕೆ ಅವಕಾಶ ಮಾಡಿಕೊಡಲೇ ಇಲ್ಲ. ಕಳೆದ ಶನಿವಾರದಂದು ತುಮಕೂರು-ಬೆಂಗಳೂರು ನಡುವಿನ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗಲೇ ಚಂದ್ರಮ್‌ ಅವರ ಐಷಾರಾಮಿ ಹಾಗೂ ದುಬಾರಿ ವೋಲ್ವೋ ಕಾರ್‌ನ ಮೇಲೆ ಕಂಟೇನರ್‌ ಲಾರಿ ಬಿದ್ದು ಸ್ಥಳದಲ್ಲಿಯೇ ಸಾವು ಕಂಡಿದ್ದರು. ಅವರೊಂದಿಗೆ ಕುಟುಂಬದ ಇನ್ನೂ ಐವರು ಸಾವು ಕಂಡಿದ್ದರು. 6 ಮಂದಿಯ ಸಾವಿಗೆ ಇಡೀ ಕರ್ನಾಟಕ ಮರುಕಪಟ್ಟಿತ್ತು. ಇಷ್ಟೆಲ್ಲಾ ಇದ್ದರೂ, ನೆಲಮಂಗಲದ ಜನತೆಗೆ ಮಾತ್ರ ಈ ಸಾವು ವಿಶೇಷ ಅನಿಸದೇ ಇರೋದಕ್ಕೆ ಕಾರಣವಿತ್ತು. ಅದಕ್ಕೆ ಪ್ರಮುಖ ಕಾರಣ ಕಾರ್‌ನ ನಂಬರ್‌ ಪ್ಲೇಟ್‌ ಹಾಗೂ ಕಂಟೇನರ್‌ನ ನಂಬರ್‌ ಪ್ಲೇಟ್‌ನ ಕೊನೆಯ ಸಂಖ್ಯೆ.

Add Asianetnews Kannada as a Preferred SourcegooglePreferred

ಅಪಘಾತಕ್ಕೆ ಈಡಾದ ಚಂದ್ರಮ್‌ ಯೇಗಪ್ಪಗೋಳ ಅವರ ವೋಲ್ವೋ ಕಾರ್‌ನ ನಂಬರ್ ಪ್ಲೇಟ್‌ KA 02 ND 1536 ಆಗಿದ್ದರೆ, ಇವರ ಕಾರ್‌ನ ಮೇಲೆ ಬಿದ್ದ ಕಂಟೇನರ್ ಲಾರಿಯ ನಂಬರ್‌ ಪ್ಲೇಟ್‌ KA 52 B 3076. ಎರಡೂ ವಾಹನಗಳ ನಂಬರ್‌ ಪ್ಲೇಟ್‌ನ ಕೊನೆಯ ಸಂಖ್ಯೆ 6. ಇದೇ ನಂಬರ್‌ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕ್ಕೆ ಕಾರಣ ಅನ್ನೋದು ಸ್ಥಳೀಯರ ಮಾತು. ಇದರ ಬಗ್ಗೆ 6 ವರ್ಷಗಳ ಹಿಂದೆ ಮಾಧ್ಯಮ ವರದಿ ಕೂಡ ಪ್ರಸಾರವಾಗಿತ್ತು. ನೆಲಮಂಗಲದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ನಂಬರ್ ಪ್ಲೇಟ್‌ನ ಕೊನೆಯ ಸಂಖ್ಯೆ 6 ಆಗಿದ್ದಲ್ಲಿ ಅವರು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಓಡಾಡಬೇಕು ಅನ್ನೋದು ಸ್ಥಳೀಯರ ಮಾತು. ಇದನ್ನು ನಂಬಲು ಅಸಾಧ್ಯವಾದರೂ, ಸ್ಥಳೀಯ ಜನರು ತೋರಿಸೋದು ಈಗಾಗಲೇ ಅಪಘಾತವಾಗಿರುವ ಗಾಡಿಗಳ ನಂಬರ್‌ಗಳನ್ನು.

Nelamangala Accident: ಪುಟ್ಟಿಯ ಜೊತೆ 2 ತಿಂಗಳ ಹಿಂದಷ್ಟೇ 1 ಕೋಟಿಯ ಕಾರು ಖರೀದಿಸಿ ಸಂಭ್ರಮಿಸಿದ್ದ ಚಂದ್ರಮ್‌ ಯೇಗಪ್ಪಗೋಳ!

ಯೆಸ್‌, ನೆಲಮಂಗಲ ಟ್ರಾಫಿಕ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿರುವ ವಾಹನಗಳನ್ನು ಇರಿಸಲಾಗಿದೆ. ಅಚ್ಚರಿ ಎನ್ನುವಂತೆ ಬಹುತೇಕ ವಾಹನಗಳ ನಂಬರ್‌ ಪ್ಲೇಟ್‌ನ ಕೊನೆ ಸಂಖ್ಯೆ 6 ಆಗಿದೆ. ಕೊನೇ ನಂಬರ್‌ 6 ಆಗಿದ್ದರೆ ಈ ಭಾಗದಲ್ಲಿ ಆಕ್ಸಿಡೆಂಟ್‌ ಆಗೋದು ಖಚಿತ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎನ್ನುತ್ತಾರೆ. KA 51 Q 5156, KA 42 H 6326, KA 44 J 5086, KA 04 C 9626, KA 51 D 1786, KA 18 A 9426, KA 54 1676, KA 02 D 3406 ಹಾಗೂ KA 44 K 1706 ನಂಬರ್‌ನ ಗಾಡಿಗಳು ಈಗಾಗಲೇ ನೆಲಮಂಗಲದ ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾಗಿವೆ. ಈಗ ಈ ಸಾಲಿಗೆ ಮತ್ತೆರಡು ವಾಹನಗಳು ಸೇರ್ಪಡೆಯಾಗಿರುವ ಬೆನ್ನಲ್ಲಿಯೇ ಮತ್ತೆ ನಂಬರ್‌ ಪ್ಲೇಟ್‌ 6 ಭೂತ ಸ್ಥಳೀಯರನ್ನು ಆವರಿಸಿದೆ. ಅದಲ್ಲದೆ, ಈ ಬಾರಿಯ ಅಪಘಾತದಲ್ಲಿ ಸಾವು ಕಂಡವರ ಸಂಖ್ಯೆಯೂ ಕೂಡ 6 ಆಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹೊಸದಾಗಿ ಖರೀದಿ ಮಾಡಿದ ವಾಹನದ ಕೊನೆಯಲ್ಲಿ ಹಾಗೇನಾದರೂ 6 ನಂಬರ್‌ ಬಂದಲ್ಲಿ ಅದನ್ನು ಸಾಧ್ಯವಾದಷ್ಟು ಬೇಗ ಸೇಲ್‌ ಮಾಡುವ ಪ್ರವೃತ್ತಿಯೂ ಈ ಭಾಗದ ಜನರಲ್ಲಿದೆ.

Photos: ನೆಲಮಂಗಲ ಭೀಕರ ಆಕ್ಸಿಡೆಂಟ್‌, IAST ಕಂಪನಿ ಮಾಲೀಕ ಚಂದ್ರಮ್‌ ಇಡೀ ಕುಟುಂಬ ಸಾವು

ಚಿಕ್ಕ ಶಾರ್ಟ್ಸ್‌ನಲ್ಲಿ ಮಾಸ್ಟರ್‌ ಆನಂದ್‌ ಹೆಂಡ್ತಿ ರೀಲ್ಸ್‌, 'ಡಿವೋರ್ಸ್‌ ಪಕ್ಕಾ' ವದಂತಿಗೆ ಫುಲ್‌ಸ್ಟಾಪ್‌ ಹಾಕಿದ ಯಶಸ್ವಿನಿ!