ರಾಜಸ್ತಾನ, ಮಹಾರಾಷ್ಟ್ರದಲ್ಲಿ ಡೀಸೆಲ್ ದರ ಕಡಿಮೆ ಮಾಡುವಂತೆ ಕಾಂಗ್ರೆಸ್‌ಗೆ ಸಿ ಟಿ ರವಿ ಸವಾಲ್!
ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ (Petrol, Diesel) ಮೇಲಿನ ಅಬಕಾರಿ ಸುಂಕವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 5 ರೂ ಹಾಗೂ ಡಿಸೇಲ್ ಮೇಲಿನ ಸುಂಕವನ್ನು 10 ರೂ ಇಳಿಕೆ ಮಾಡಿದೆ.
ಬೆಂಗಳೂರು (ನ. 04): ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ (Petrol, Diesel) ಮೇಲಿನ ಅಬಕಾರಿ ಸುಂಕವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 5 ರೂ ಹಾಗೂ ಡಿಸೇಲ್ ಮೇಲಿನ ಸುಂಕವನ್ನು 10 ರೂ ಇಳಿಕೆ ಮಾಡಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ತಲಾ 7 ರೂ ಇಳಿಕೆ ಮಾಡಿದೆ. ಇದರಿಂದಾಗಿ ರಾಜ್ಯದಲ್ಲಿ ಪೆಟ್ರೋಲ್ 102 ರೂ, ಡಿಸೇಲ್ 87 ರೂ ಇಳಿಕೆಯಾಗಿದೆ. ರಾಜ್ಯ ಸರ್ಕಾರದ ಘೋಷಣೆ ಶುಕ್ರವಾರದಿಂದ ಜಾರಿಗೆ ಬರುವ ಸಾಧ್ಯತೆ ಇದೆ.
News Hour: ಪೆಟ್ರೋಲ್ ಭಾರೀ ಇಳಿಕೆ, ಜಾಗತಿಕ ಮನ್ನಣೆಗೆ ಭಾರತದ ಲಸಿಕೆ
'ರಾಜಸ್ತಾನ, ಮಹಾರಾಷ್ಟ್ರದಲ್ಲಿ ಪೆಟ್ರೋಲ್ ರೇಟ್ ಜಾಸ್ತಿಯಿದೆ. ಕಾಂಗ್ರೆಸ್ ಡೀಸೆಲ್ ದರವನ್ನು 20 ರೂ ಕಡಿಮೆ ಮಾಡಲಿ' ಎಂದು ಸಿ ಟಿ ರವಿ ಸವಾಲು ಹಾಕಿದ್ದಾರೆ.