ಕೋವಿಡ್ ಕೇಂದ್ರದಲ್ಲಿ ವೈದ್ಯರ ಹುಟ್ಟುಹಬ್ಬವನ್ನು ರೋಗಿಗಳು ಆಚರಿಸಿದ್ದು ಹೀಗೆ
ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಕೃಷ್ಣನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿ, ವೈದ್ಯರಿಗೆ ಶುಭ ಹಾರೈಸಿದ್ದಾರೆ.
ಬೆಂಗಳೂರು (ಮೇ. 13): ರಾಷ್ಟ್ರೋತ್ಥಾನ ಪರಿಷತ್, ಕೋವಿಡ್ ಹೋರಾಟಕ್ಕೆ ಕೈ ಜೋಡಿಸಿದ್ದು, ರಾಮಮೂರ್ತಿ ನಗರ ಹಾಗೂ ಬನಶಂಕರಿ ಶಾಲೆಗಳಲ್ಲಿ 'ಕೋವಿಡ್ ಐಸೋಲೇಷನ್ ಸೆಂಟರ್'ಗಳನ್ನು ಪ್ರಾರಂಭಿಸಿದೆ. ಕೆಲವು ಷರತ್ತುಗಳೊಂದಿಗೆ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಕೃಷ್ಣನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿ, ವೈದ್ಯರಿಗೆ ಶುಭ ಹಾರೈಸಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ ಕೋವಿಡ್ ಸಂಕಷ್ಟ ಸಂದರ್ಭದಲ್ಲಿ, ಸೋಂಕಿತರಿಗೆ ನೆರವು ನೀಡುತ್ತಿದೆ. ಐಸೋಲೇಷನ್ ಕೇಂದ್ರ, ಸೋಂಕಿತರಿಗೆ ಅಗತ್ಯ ವ್ಯವಸ್ಥೆ ಮಾಡಲು ಕಾರ್ಯಕರ್ತರು, ವ್ಯಾಕ್ಸಿನ್‌ಗೂ ಮುಂಚೆ ರಕ್ತದಾನ ಶಿಬಿರ, ಮನೆಯಲ್ಲಿಯೇ ಐಸೋಲೇಷನ್ ಆದವರಿಗೆ, ಊಟದ ವ್ಯವಸ್ಥೆ, ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ, ಶವಾಗಾರ ಸ್ವಚ್ಛತೆ, ಹೀಗೆ ಎಲ್ಲಾ ರೀತಿಯಲ್ಲೂ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದ್ದು, ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.