ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ; ಪ್ರತಿ ಭಾನುವಾರ ಲಾಕ್‌ಡೌನ್
ಇಂದಿನಿಂದ ರಾಜ್ಯಾದ್ಯಂತ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ವಸ್ತು ಸೇವೆ ಹೊರತುಪಡಿಸಿ ಉಳಿದ ವ್ಯಕ್ತಿಗಳ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಬೆಂಗಳೂರು (ಜೂ. 29): ಇಂದಿನಿಂದ ರಾಜ್ಯಾದ್ಯಂತ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ವಸ್ತು ಸೇವೆ ಹೊರತುಪಡಿಸಿ ಉಳಿದ ವ್ಯಕ್ತಿಗಳ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮತ್ತೆ ಲಾಕ್‌ಡೌನ್ ಭಯ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ
ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಪರಾರಮರ್ಶಿಸಿ ಕೊರೋನಾ ಸೋಂಕು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ಸಂಬಂಧ ಭಾನುವಾರ ಲಾಕ್ಡೌನ್ ಜಾರಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಜುಲೈ 5 ರಿಂದ ಆಗಸ್ಟ್ 2 ರವರೆಗೆ ಎಲ್ಲಾ ಭಾನುವಾರಗಳಂದು ಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಅಗತ್ಯ ಸರಕು-ಸೇವೆಗಳಿಗೆ ಅನುಮತಿ ಇರುತ್ತದೆ.