Asianet Suvarna News Asianet Suvarna News

ಧೈರ್ಯವಾಗಿರಿ, ಸಾಮಾನ್ಯ ಕಾಯಿಲೆಯೆಂದು ಭಾವಿಸಿ: ಕೊರೊನಾ ಗೆದ್ದವರು ಹೇಳೋದಿದು..!

ಕೊರೊನಾ ಬಂತೆಂದರೆ ಸಾಕು ಜೀವನವೇ ಮುಗಿದು ಹೋಯಿತು ಎಂದು ಯೋಚಿಸುವವರೇ ಜಾಸ್ತಿ. ಭಯಪಡುವವರೇ ಜಾಸ್ತಿ. ಆದರೆ ಭಯಪಡುವ ಅಗತ್ಯವಿಲ್ಲವೆಂದು ಕೊರೊನಾ ಗೆದ್ದು ಬಂದವರ ಅನುಭವದ ಮಾತಿದು. 
 

ಬೆಂಗಳೂರು (ಜು. 21): ಕೊರೊನಾ ಬಂತೆಂದರೆ ಸಾಕು ಜೀವನವೇ ಮುಗಿದು ಹೋಯಿತು ಎಂದು ಯೋಚಿಸುವವರೇ ಜಾಸ್ತಿ. ಭಯಪಡುವವರೇ ಜಾಸ್ತಿ. ಆದರೆ ಭಯಪಡುವ ಅಗತ್ಯವಿಲ್ಲವೆಂದು ಕೊರೊನಾ ಗೆದ್ದು ಬಂದವರ ಅನುಭವದ ಮಾತಿದು. 

'ಕೊರೊನಾ ಬಂದ ತಕ್ಷಣ ಆತಂಕಗೊಳ್ಳುವ ಅಗತ್ಯವಿಲ್ಲ. ಇದೊಂದು ಕಾಯಿಲೆಯೇ ಅಲ್ಲ. ಧೈರ್ಯದಿಂದ ಎದುರಿಸಬೇಕಾಗುತ್ತದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಡಿದರೆ ಬೇಗ ಗುಣಮುಖರಾಗಬಹುದು. ನಮ್ಮ ಆತ್ಮವಿಶ್ವಾಸ, ಕಾಳಜಿ, ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಂಡರೆ ಬಹುಬೇಗ ಗುಣಮುಖರಾಗಬಹುದು. ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ' ಎಂಬುದು ಸೋಂಕಿನಿಂದ ಗುಣಮುಖರಾದವರ ಆತ್ಮ ವಿಶ್ವಾಸದ ಮಾತುಗಳಿವು..!

ಕೊರೊನಾ ನಿಮ್ಮನ್ನು 'ಕೊಲ್ಲುವುದಿಲ್ಲ'! ಭಯಪಟ್ಟಿದ್ದಕ್ಕೆ ನಾಚಿಕೆ ಅನಿಸ್ತಿದೆ ಎಂದ ಗುಣಮುಖ