ವಾಣಿಜ್ಯ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರ ಬಯಲು ಮಾಡಿದ ಕವರ್ ಸ್ಟೋರಿ!

ದೇಶದ ಬೊಕ್ಕಸಕ್ಕೆ ಕನ್ನ ಹಾಕುತ್ತಿರುವ ಸರ್ಕಾರಿ ಅಧಿಕಾರಿಗಳ ಮುಖವನ್ನು ಕವರ್ ಸ್ಟೋರಿ ತಂಡ ಬಯಲು ಮಾಡಿದೆ. ಬೆಂಗಳೂರು ತುಮಕೂರು ನ್ಯಾಷನಲ್ ಹೈವೇ ಬಳಿ ಕಾರ್ಯಾಚರಣೆ ನಡೆಸುವಾಗ ನೆಲಮಂಗಲ ಟೋಲ್ ಬಳಿ ಒಂದು ಟ್ಯಾಕ್ಸ್ ವೆಹಿಕಲ್ ಕಣ್ಣಿಗೆ ಬೀಳುತ್ತದೆ. 

First Published Aug 14, 2021, 5:22 PM IST | Last Updated Aug 14, 2021, 5:33 PM IST

ಬೆಂಗಳೂರು (ಆ. 14): ದೇಶದ ಬೊಕ್ಕಸಕ್ಕೆ ಕನ್ನ ಹಾಕುತ್ತಿರುವ ಸರ್ಕಾರಿ ಅಧಿಕಾರಿಗಳ ಮುಖವನ್ನು ಕವರ್ ಸ್ಟೋರಿ ತಂಡ ಬಯಲು ಮಾಡಿದೆ. ಬೆಂಗಳೂರು ತುಮಕೂರು ನ್ಯಾಷನಲ್ ಹೈವೇ ಬಳಿ ಕಾರ್ಯಾಚರಣೆ ನಡೆಸುವಾಗ ನೆಲಮಂಗಲ ಟೋಲ್ ಬಳಿ ಒಂದು ಟ್ಯಾಕ್ಸ್ ವೆಹಿಕಲ್ ಕಣ್ಣಿಗೆ ಬೀಳುತ್ತದೆ.

ಫುಲ್ ನೈಟ್ 5 ಸಾವಿರ..ತಾಸಿಗೆ 2 ಸಾವಿರ! ಬೆಂಗಳೂರಿನ ನಶೆ ರಾಣಿಯರು

ನೆಲಮಂಗಲದಿಂದ ದಾಬಸ್ ಪೇಟೆಯವರೆಗೆ ಜೋನ್ 1 ರ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಓಡಾಡುವ ಸರಕು ಸಾಗಾಣಿಕೆ ವಾಹನಗಳನ್ನು ಪರಿಶೀಲಿಸುವುದು ಈ ಅಧಿಕಾರಿಗಳ ಕೆಲಸ. ಒಂದಷ್ಟು ಮಂದಿ ದಾಖಲೆ ತೋರಿಸಿದರೆ, ಕೆಲವರು ತೋರಿಸುತ್ತಿರಲಿಲ್ಲ. ದಾಖಲೆ ಇಲ್ಲದವರನ್ನು ಸೈಡಿಗೆ ಕರೆದು ಡೀಲ್ ಮಾಡುತ್ತಿದ್ದರು. ಇವರನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಕವರ್ ಸ್ಟೋರಿ ತಂಡ ಒಂದು ಗೂಡ್ಸ್ ವಾಹನ ರೆಡಿ ಮಾಡಿ ಟೋಲ್ ಬಳಿ ಹೋಗಲಾಯಿತು. ಆಗ ಅಧಿಕಾರಿಗಳು ಯಾವ ರೀತಿ ಸಿಕ್ಕಿ ಬಿದ್ದರು ನೀವೇ ನೋಡಿ..!