Asianet Suvarna News Asianet Suvarna News

10 ದಿನಗಳಲ್ಲಿ 9 ಕಂಟೈನ್ಮೆಂಟ್ ಝೋನ್‌ಗಳು; ಬೆಂಗಳೂರಿನಲ್ಲಿ ಕೊರೊನಾ 2 ನೇ ಅಲೆ ಆತಂಕ

ಕಳೆದ 10 ದಿನಗಳಿಂದ ರಾಜಧಾನಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕವೂ ಹೆಚ್ಚಾಗಿದೆ. 10 ದಿನಗಳಲ್ಲಿ 9 ಕಂಟೈನ್ಮೆಂಟ್ ಝೋನ್‌ಗಳು ಹುಟ್ಟಿವೆ. 

ಬೆಂಗಳೂರು (ಫೆ. 28): ಕಳೆದ 10 ದಿನಗಳಿಂದ ರಾಜಧಾನಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕವೂ ಹೆಚ್ಚಾಗಿದೆ. 10 ದಿನಗಳಲ್ಲಿ 9 ಕಂಟೈನ್ಮೆಂಟ್ ಝೋನ್‌ಗಳು ಹುಟ್ಟಿವೆ. ಈ ಕಂಟೈನ್ಮೆಂಟ್‌ ಝೋನ್ ಬರುವವರು, ಹೋಗುವವರ ಮೇಲೆ ನಿಗಾ ವಹಿಸಲಾಗಿದೆ.  ಅಗತ್ಯ ಇರುವ ಪದಾರ್ಥಗಳನ್ನು ಅಲ್ಲಿಗೆ ಪೂರೈಕೆ ಮಾಡಲಾಗುತ್ತಿದೆ. 

ಬೇಗ್, ಇಬ್ರಾಹಿಂ ಆಯ್ತು ಈಗ ಸೇಠ್; ಸಿದ್ದರಾಮಯ್ಯ ವಿರುದ್ಧ ಶುರುವಾಗಿದೆ 'ಮುಸ್ಲಿಂ ಬಂಡಾಯ'

ಇನ್ನು ಬಿಬಿಎಂಪಿ ವ್ಯಾಪ್ತಿಯ ಅಟ್ಟೂರಿನ ಬಳಿಯ ಸಂಭ್ರಮ್‌ ಕಾಲೇಜು, ಅಗ್ರಗಾಮಿ ಕಾಲೇಜು ಮತ್ತು ಪೂರ್ವ ವೆನಿಜಿಯಾ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ಮತ್ತೆ ಐದು ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ.