Asianet Suvarna News Asianet Suvarna News

ಬೇಗ್, ಇಬ್ರಾಹಿಂ ಆಯ್ತು ಈಗ ಸೇಠ್; ಸಿದ್ದರಾಮಯ್ಯ ವಿರುದ್ಧ ಶುರುವಾಗಿದೆ 'ಮುಸ್ಲಿಂ ಬಂಡಾಯ'

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಚುನಾವಣಾ ಮೈತ್ರಿ ವಿಚಾರ ಬೇರೆ ಬೇರೆ ಟ್ವಿಸ್ಟ್ ತೆಗೆದುಕೊಳ್ಳುತ್ತಿದೆ. ಡಿಕೆಶಿ, ಸಿದ್ದರಾಮಯ್ಯ ನಡುವಿನ ಪ್ರತಿಷ್ಠೆ ಫೈಟ್‌ಗೆ ಇನ್ನಷ್ಟು ಪುಷ್ಟಿ ನೀಡುತ್ತಿದೆ.  

ಬೆಂಗಳೂರು (ಫೆ. 28): ಮೈಸೂರು ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಚುನಾವಣಾ ಮೈತ್ರಿ ವಿಚಾರ ಬೇರೆ ಬೇರೆ ಟ್ವಿಸ್ಟ್ ತೆಗೆದುಕೊಳ್ಳುತ್ತಿದೆ. ಡಿಕೆಶಿ, ಸಿದ್ದರಾಮಯ್ಯ ನಡುವಿನ ಪ್ರತಿಷ್ಠೆ ಫೈಟ್‌ಗೆ ಇನ್ನಷ್ಟು ಪುಷ್ಟಿ ನೀಡುತ್ತಿದೆ. ಇದರ ಮಧ್ಯೆ ತನ್ವಿರ್ ಸೇಠ್ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಮುಸ್ಲಿಂ -ಕಾಂಗ್ರೆಸ್ ನಡುವಿನ ಸಂಬಂಧವನ್ನು ಹದಗೆಡಿಸುತ್ತಿದೆ. ' ಮೈತ್ರಿ ಮಾಡಿಕೊಳ್ಳಲು ಹೇಳಿದ್ದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಡು ಮಗು ಆಗಿಲ್ಲ, ಹೆಣ್ಣು ಮಗು ಆಗಿದೆ ಅಷ್ಟೇ. ಗಂಡು ಮಗು ಆದರೆ ಓಕೆ, ಹೆಣ್ಣು ಮಗು ಬೇಡ ಅಂದರೆ ನಾನು ಒಪ್ಪುವುದಿಲ್ಲ' ಎಂದಿದ್ಧಾರೆ. 

10 ದಿನಗಳಲ್ಲಿ 9 ಕಂಟೈನ್ಮೆಂಟ್ ಝೋನ್‌ಗಳು; ಬೆಂಗಳೂರಿನಲ್ಲಿ 2 ನೇ ಅಲೆ ಆತಂಕ

ಸೋಮವಾರ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ವರದಿ ನೀಡುವೆ. ನನಗೆ ಪಕ್ಷದ ಋುಣವಿದೆ, ವ್ಯಕ್ತಿಗಳ ವರ್ಚಸ್ಸು ವಿಚಾರ ಬಂದಾಗ ಎಲ್ಲರಿಗೂ ಗೌರವ ವರ್ಚಸ್ಸು ಇದೆ. ನನಗೂ ನನ್ನದೇ ಆದ ಗೌರವ ಇದೆ. ನಾನು ಯಾರನ್ನು ಕರೆಸಿ ಪ್ರತಿಭಟನೆ ಮಾಡಿಸಿಲ್ಲ. ನಾನು ಯಾವುದಕ್ಕೂ ಹೆದರುವುದಿಲ್ಲ. ಅಮಾನತು ಮಾಡಿದರೂ ಸಿದ್ಧವಾಗಿದ್ದೇನೆ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆಯಲ್ಲ ಎಂದಿದ್ದಾರೆ. 

Video Top Stories