Asianet Suvarna News Asianet Suvarna News

ಕೇಂದ್ರದಿಂದ ಯಾವುದೇ ಕೊರತೆಯಿಲ್ಲ, ನಿರೀಕ್ಷೆಗೂ ಮೀರಿ ಸಹಕಾರ ಕೊಡ್ತಿದ್ದಾರೆ: ಸಿಎಂ ಬಿಎಸ್‌ವೈ

-  ಕರ್ನಾಟಕಕ್ಕೆ ನಿರಂತರ ಸಹಕಾರ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ 

- ಗೃಹ ಸಚಿವರ ಜೊತೆ ಅಮಿತ್ ಶಾ ಚರ್ಚೆ

- ನಿರೀಕ್ಷೆಗೂ ಮೀರಿ ಸಹಕಾರ, ಯಾವುದೇ ತೊಂದರೆಯಿಲ್ಲ

May 11, 2021, 1:54 PM IST

ಬೆಂಗಳೂರು (ಮೇ. 11): 'ಕೊರೊನಾ ನಿನ್ನೆಯಿಂದ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿದೆ. ಜನ ಮಾಸ್ಕ್, ಅಂತರ ಕಾಯ್ದುಕೊಂಡು ಸಹಕಾರ ಕೊಟ್ಟರೆ ನಿಯಂತ್ರಣ ಸಾಧ್ಯ. ಹಾಗಾಗಿ ಎಲ್ಲರಿಗೂ ನಿಯಮ ಪಾಲಿಸುವಂತೆ ಮನವಿ ಮಾಡುತ್ತೇನೆ. ಬೇಕಾಬಿಟ್ಟಿ ಮನೆಯಿಂದ ಹೊರಬಂದು ಪೊಲೀಸರು ಲಾಠಿ ಚಾರ್ಜ್ ಮಾಡುವಂತೆ ಮಾಡಬೇಡಿ'' ಎಂದು ಸಿಎಂ ಮನವಿ ಮಾಡಿದ್ದಾರೆ. 

ರಿಮ್ಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರ ಹೆಸರಲ್ಲಿ ರೆಮ್‌ಡಿಸಿವಿರ್ ಗೋಲ್‌ಮಾಲ್.?

'ದೆಹಲಿಯ ಜೊತೆ ಸಂಪರ್ಕದಲ್ಲಿದ್ದೇನೆ. ನಿರಂತರ ಸಹಕಾರ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಅಮಿತ್ ಶಾ ಕೂಡಾ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಇಂದು ಬೆಳಿಗ್ಗೆ ದೆಹಲಿಯಿಂದ ಆಕ್ಸಿಜನ್ ಬಂದಿದೆ. ಯಾವುದೇ ಸಮಸ್ಯೆಯಿಲ್ಲ' ಎಂದು ಸಿಎಂ ಹೇಳಿದ್ದಾರೆ.