ಕೊರೋನಾ ಕೇಸ್ ಇಳಿಕೆ, ಗಣೇಶ ಹಬ್ಬದಲ್ಲಿ ಮೈಮರೆಯಬೇಡಿ: ಬಿಬಿಎಂಪಿ ಆಯುಕ್ತರಿಂದ ಎಚ್ಚರಿಕೆ

ರಾಜ್ಯದಲ್ಲಿ ಕೊರೋನಾ ಕೇಸ್‌ಗಳು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಶನಿವಾರ 983 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 21 ಮಂದಿ ಸಾವನ್ನಪ್ಪಿದ್ಧಾರೆ. 

First Published Sep 5, 2021, 2:08 PM IST | Last Updated Sep 5, 2021, 2:08 PM IST

ಬೆಂಗಳೂರು (ಸೆ. 05): ರಾಜ್ಯದಲ್ಲಿ ಕೊರೋನಾ ಕೇಸ್‌ಗಳು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಶನಿವಾರ 983 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 21 ಮಂದಿ ಸಾವನ್ನಪ್ಪಿದ್ಧಾರೆ. 

ಪಂಚಮಸಾಲಿ ಹೋರಾಟದಲ್ಲಿ ಜನಸಾಗರ, ಕೋವಿಡ್ ರೂಲ್ಸ್ ಬ್ರೇಕ್, ಬೇಕಿತ್ತಾ ಇವೆಲ್ಲಾ.?

'ಕೊರೋನಾ ಕಡಿಮೆಯಿದೆ ಎಂದು ಮೈಮರೆಯಬೇಡಿ. ಯಾವಾಗ ಬೇಕಾದರೂ ಕೇಸ್ ಹೆಚ್ಚಾಗಬಹುದು. ಸರ್ಕಾರ, ಬಿಬಿಎಂಪಿ ಕೇಸ್‌ಗಳನ್ನು ಹತೋಟಿಯಲ್ಲಿಟ್ಟಿದೆ. ಜನ ಸರಳವಾಗಿ ಮನೆಯಲ್ಲಿಯೇ ಹಬ್ಬವನ್ನು ಆಚರಿಸುವುದು ಒಳ್ಳೆಯದು. ಗಣೇಶ ಕೂರಿಸುವ ಬಗ್ಗೆ ಕೆಲವು ನಿಬಂಧನೆಗಳನ್ನು ಹಾಕಲಾಗಿದೆ. ಈ ಬಗ್ಗೆ ಇನ್ನೊಂದು ಸುತ್ತಿನ ಪರಿಶೀಲನೆ ನಡೆಸಲಾಗುವುದು' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.