ಬೆಲೆ ಏರಿಕೆಗೆ ವಿರೋಧ: ಬೊಮ್ಮಾಯಿ ಸರ್ಕಾರ ಕಟ್ಟಿಹಾಕಲು ಕಾಂಗ್ರೆಸ್ ನಿರ್ಧಾರ
* ನಮ್ಮ ಹೋರಾಟ ನಿರಂತರ: ಸಿದ್ದರಾಮಯ್ಯ
* ಸರ್ಕಾರವನ್ನ ಕೆಳಗಿಳಿಸುವರೆಗೂ ನಮ್ಮ ಹೋರಾಟ: ಡಿಕೆಶಿ
* ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಜಾಥಾ
ಬೆಂಗಳೂರು(ಸೆ.24): ಬೆಲೆ ಏರಿಕೆಯನ್ನ ವಿರೋಧಿಸಿದ ಕಾಂಗ್ರೆಸ್ ಇಂದು(ಶುಕ್ರವಾರ) ನಗರದಲ್ಲಿ ಟಾಂಗಾ ಚಲೋ ನಡೆಸಿದೆ. ಕೆಪಿಸಿಸಿ ಕಚೇರಿಯಿಂದ ಹೊರಟ ಜಾಥಾ ವಿಧಾನಸೌಧದವರೆಗೆ ಸಾಗಲಿದೆ. ಅಧಿವೇಶನದ ಕೊನೆ ದಿನ ಕಾಂಗ್ರೆಸ್ ಟಾಂಗಾ ಚಲೋ ನಡೆಸಿದೆ. ಅಧಿವೇಶನ ಆರಂಭದ ದಿನದಂದೂ ಕೂಡ ಬೆಲೆ ಏರಿಕೆಯನ್ನ ವಿರೋಧಿಸಿ ಎತ್ತಿನಗಾಡಿಯಲ್ಲಿ ಬರುವ ಮೂಲಕ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ನಮ್ಮ ಹೋರಾಟ ಹೀಗೆ ನಿರಂತರವಾಗಿ ಸಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸರ್ಕಾರವನ್ನ ಕೆಳಗಿಳಿಸುವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ಜಾತಿಯ ನೆರಳಿನಲ್ಲಿ ನಾಯಕತ್ವ ಪಡೆಯಲು ಭಾರೀ ಕಸರತ್ತು