Asianet Suvarna News Asianet Suvarna News

ಗೊತ್ತೇನ್ರಿ...ಕೇಳ್ರಿ ಇಲ್ಲಿ... ಸಿದ್ದರಾಮಯ್ಯ 'ಲಾ' ಪಾಯಿಂಟ್‌ಗೆ ತಬ್ಬಿಬ್ಬಾಯ್ತು ವಿಧಾನಸಭೆ.!

Sep 23, 2021, 2:42 PM IST

ಬೆಂಗಳೂರು (ಸೆ. 23): ವಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ಆಗಾಗ ಟೀಚರ್ ಆಗುತ್ತಾರೆ, ಆಗಾಗ ಹಾಸ್ಯ ಚಟಾಕಿಯನ್ನೂ ಹಾರಿಸುತ್ತಾರೆ, ಇನ್ನು ಕೆಲವು ಸಲ ಗಂಭೀರವಾದ ವಿಚಾರವನ್ನು ಎತ್ತಿ ಲಾಯರ್ ಕೂಡಾ ಆಗುತ್ತಾರೆ.  ಇಂತದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಯ್ತು ವಿಧಾನಸಭೆ. 

ರಾಜ್ಯದಲ್ಲಿ ಹೆಚ್ಚುತ್ತಿದೆ ಮತಾಂತರ, ನನ್ನ ತಾಯಿಯನ್ನೂ ಬಿಟ್ಟಿಲ್ಲ! ಸದನದಲ್ಲಿ ಗೂಳಿಹಟ್ಟಿ ಗೋಳು!

ಮೈಸೂರು ಗ್ಯಾಂಗ್ ರೇಪ್ ವಿಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ. ಮೈಸೂರು ಪ್ರಕರಣದ ಕುರಿತು ಎಫ್‌ಐಆರ್‌ ದಾಖಲಿಸುವಲ್ಲಿ ವಿಳಂಬವಾಗಿದೆ. ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದೆ. ಯುವತಿ ಸಂಜೆ 7ಕ್ಕೆ ಅಲ್ಲಿಗೇಕೆ ಹೋಗಿದ್ದಳು ಎಂದು ಗೃಹ ಸಚಿವರು ಕೇಳಿದ್ದಾರೆ. ಇದು ಜವಾಬ್ದಾರಿಯುತ ಹೇಳಿಕೆಯೇ?ಪೊಲೀಸರು ಏನು ನಿದ್ದೆ ಮಾಡುತ್ತಿದ್ದರಾ.? ಘಟನೆ ನಡೆದ ಸ್ಥಳ ಯಾರ ವ್ಯಾಪ್ತಿಗೆ ಬರುತ್ತದೆ ಎಂದು ಈಗಲೂ ಗೊತ್ತಿಲ್ಲ. ಪೊಲೀಸರು ಯುವತಿಯ ಹೇಳಿಕೆ ಪಡೆದಿಲ್ಲ. ಇವರಿಂದ ಇನ್ನೆಂಥಾ ರಕ್ಷಣೆ ಸಿಗಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.