ರಾಜ್ಯದಲ್ಲಿ ಹೆಚ್ಚುತ್ತಿದೆ ಮತಾಂತರ, ನನ್ನ ತಾಯಿಯನ್ನೂ ಬಿಟ್ಟಿಲ್ಲ! ಸದನದಲ್ಲಿ ಗೂಳಿಹಟ್ಟಿ ಗೋಳು!

ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಚಟುವಟಿಕೆ ವ್ಯಾಪಕವಾಗಿದ್ದು, ಸ್ವತಃ ತಮ್ಮ ತಾಯಿಯನ್ನೇ ಆಮಿಷವೊಡ್ಡಿ ಮತಾಂತರ ಮಾಡಲಾಗಿದೆ ಎಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್‌ ಅಳಲು ತೋಡಿಕೊಂಡಿದ್ದಾರೆ. 

First Published Sep 23, 2021, 1:43 PM IST | Last Updated Sep 23, 2021, 1:52 PM IST

ಬೆಂಗಳೂರು (ಸೆ. 23): ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಚಟುವಟಿಕೆ ವ್ಯಾಪಕವಾಗಿದ್ದು, ಸ್ವತಃ ತಮ್ಮ ತಾಯಿಯನ್ನೇ ಆಮಿಷವೊಡ್ಡಿ ಮತಾಂತರ ಮಾಡಲಾಗಿದೆ ಎಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್‌ ಅಳಲು ತೋಡಿಕೊಂಡ ಘಟನೆಗೆವಿಧಾನಸಭೆ ಸಾಕ್ಷಿಯಾಯಿತು. ಶೇಖರ್‌ ಅವರ ಕಳವಳಕ್ಕೆ ಇತರೆ ಹಲವು ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ಕೂಡ ಧ್ವನಿಗೂಡಿಸಿದ್ದು, ಆಮಿಷವೊಡ್ಡಿ ನಡೆಸುವ ಇಂಥ ಮತಾಂತರ ತಡೆಗೆ ಕಠಿಣ ಕಾನೂನು ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಮತಾಂತರಕ್ಕೆ ಮುಂದಾದ್ರೆ ಸರ್ಕಾರದಿಂದ ಪಂಚ್, ಕಲಾಪದಲ್ಲಿ ಜಾರಿದ ಸಿದ್ದು ಪಂಚೆ!

ತಮ್ಮ ಹೊಸದುರ್ಗ ಕ್ಷೇತ್ರ ಒಂದರಲ್ಲೇ 15ರಿಂದ 20 ಸಾವಿರ ಮಂದಿಯನ್ನು ಮತಾಂತರಗೊಳಿಸಲಾಗಿದೆ. ನನ್ನ ತಾಯಿಗೆ ಹಿಂದೂ ಸಂಪ್ರದಾಯಗಳನ್ನು ತ್ಯಜಿಸುವಂತೆ ಬ್ರೈನ್‌ವಾಶ್‌ ಮಾಡಿದ್ದಾರೆ. ನಾಮ ತೆಗೆಯುವಂತೆ ಹಾಗೂ ಹಿಂದೂ ದೇವಾಲಯಗಳಿಗೆ ಹೋಗದಂತೆ ಕಟ್ಟಾಜ್ಞೆ ವಿಧಿಸುತ್ತಾರೆ. ಇದೀಗ ನಮ್ಮ ತಾಯಿಗೆ ಕುಂಕುಮ, ದೇವರ ಪೂಜೆ, ಪೂಜಾಸಾಮಗ್ರಿ ಎಂದರೆ ಆಗುವುದಿಲ್ಲ. ಸದಾ ಕ್ರಿಶ್ಚಿಯನ್‌ ಪ್ರಾರ್ಥನೆ, ಹಾಡು, ರಿಂಗ್‌ ಟೋನ್‌ ಸಹ ಅದೇ ಆಗಿದೆ. ಹೀಗಾಗಿ ಜನರ ಎದುರು ನಮಗೆ ಮುಜುಗರ ಉಂಟಾಗುತ್ತಿದೆ' ಎಂದು ಗೂಳಿಹಟ್ಟಿ ಶೇಖರ್ ಹೇಳಿಕೊಂಡಿದ್ದಾರೆ.