Asianet Suvarna News Asianet Suvarna News

'ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ.'

ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ. ಸುಳ್ಳು ಹೇಳಿದ್ದ ಬಿಜೆಪಿ ರಾಜ್ಯದ ಕ್ಷಮೆ ಯಾಚಿಸಬೇಕು: ಪರೇಶ್‌ ಮೇಸ್ತಾ ಸಾವು ಆಕಸ್ಮಿಕ ಎಂದು ಸಿಬಿಐ ವರದಿ ಕೊಟ್ಟ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮುಗಿಬಿದ್ದಿದೆ.
 

Oct 4, 2022, 5:15 PM IST

ಬೆಂಗಳೂರು (ಅ.4): ಪರೇಶ್‌ ಮೆಸ್ತಾ ಸಾವು ಆಕಸ್ಮಿಕ ಎನ್ನುವ ಸಿಬಿಐ ವರದಿಗೆ ರಾಜ್ಯ ಕಾಂಗ್ರೆಸ್‌ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್‌ ವಾರ್‌ ನಡೆಸಿದೆ. ಡಿಕೆ ರವಿ ಕೊಲೆಯಾಗಿದೆ ಎಂದು ಬಿಜೆಪಿ ಆರೋಪಿತ್ತು. ಆದರೆ, ತನಿಖೆ ಮಾಡಿದ ಸಿಬಿಐ ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಹೇಳಿತ್ತು.

ತೀರ್ಥಹಳ್ಳಿಯ ನಂದಿತಾಳದ್ದು ಕೊಲೆ ಎಂದು ಬಿಜೆಪಿ ಆರೋಪ ಮಾಡುವ ಮೂಲಕ ರಾಜಕೀಯ ಮಾಡಿತ್ತು. ಸಿಐಡಿ ತನಿಖೆ ನಡೆಸಿ ವರದಿ ಮಾಡಿದ ಬಳಿಕ, ಇದೊಂದು ಆತ್ಮಹತ್ಯೆ ಎನ್ನುವುದು ಗೊತ್ತಾಗಿತ್ತು. ಬಿಜೆಪಿ ಎಲ್ಲದರಲ್ಲೂ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಈ ವಿಚಾರವಾಗಿ ಸರ್ಕಾರ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಹೇಳಿದೆ.

ಯಾವುದೇ ಆರ್ಥಿಕ ಸಹಕಾರ ಸಿಕ್ಕಿಲ್ಲ, ಪ್ರಚಾರಕ್ಕಷ್ಟೇ ಬಳಸಿದ್ದಾರೆ: ಪರೇಶ್‌ ಮೇಸ್ತಾ ತಂದೆ ಅಸಮಾಧಾನ

2017ರ ಡಿಸೆಂಬರ್‌ 6 ರಂದು ಹೊನ್ನಾವರದಲ್ಲಿ ಗಲಭೆಯಾಗಿತ್ತು. ಎರಡು ದಿನಗಳ ಬಳಿಕ ಪರೇಶ್‌ ಮೆಸ್ತಾ ಸಾವಾಗಿತ್ತು. ಹೊನ್ನಾವರದ ಶೆಟ್ಟಿಕೆರೆಯಲ್ಲಿ ಶವವಾಗಿ ಅವರು ಪತ್ತೆಯಾಗಿದ್ದರು. ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಿವೆ ಎಂದು ಕಾಂಗ್ರೆಸ್‌ ಹೇಳಿದೆ.