Hubballi-Dharwad Corporation: ಚುನಾವಣೆಯಾಗಿ 4 ತಿಂಗಳಾದ್ರೂ ಆಗದ ಮೇಯರ್-ಉಪಮೇಯರ್ ಆಯ್ಕೆ

ಹುಬ್ಬಳ್ಳಿ ಧಾರವಾಡ  (Hubballi Dharwad) ಮಹಾನಗರ ಪಾಲಿಕೆ ರಾಜ್ಯದಲ್ಲಿ ಎರಡನೇ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆದರೆ  ಚುಣಾವಣೆಯಾಗಿ 4 ತಿಂಗಳಾದ್ರೂ ಇನ್ನೂ ಮೇಯರ್ ಉಪಮೇಯರ್ ಆಯ್ಕೆ‌ಯಾಗದಿದ್ದಕ್ಕೆ ಪಾಲಿಕೆಯ ಸದ್ಯಸ್ಯರು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲಿಕೆಯ ಮುಂದೆ ಅಣುಕು ಪ್ರದರ್ಶನ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ. 28): ಹುಬ್ಬಳ್ಳಿ ಧಾರವಾಡ (Hubballi Dharwad) ಮಹಾನಗರ ಪಾಲಿಕೆ ರಾಜ್ಯದಲ್ಲಿ ಎರಡನೇ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆದರೆ ಚುಣಾವಣೆಯಾಗಿ 4 ತಿಂಗಳಾದ್ರೂ ಇನ್ನೂ ಮೇಯರ್ ಉಪಮೇಯರ್ ಆಯ್ಕೆ‌ಯಾಗದಿದ್ದಕ್ಕೆ ಪಾಲಿಕೆಯ ಸದ್ಯಸ್ಯರು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲಿಕೆಯ ಮುಂದೆ ಅಣುಕು ಪ್ರದರ್ಶನ ಮಾಡಿದ್ದಾರೆ.

ಕಳೆದ‌ ನಾಲ್ಕು ತಿಂಗಳಿಂದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಆಯ್ಕೆಯನ್ನ ಮಾಡದಿದ್ದಕ್ಕೆ ಕಾಂಗ್ರೆಸ್ ವಾರ್ಡ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಘೋಷಿತವಾಗಿ ಮೇಯರ್ ಆಗಿ ಜಗದೀಶ್ ಶೆಟ್ಟರ್ ಮತ್ತು ಉಪ ಮೇಯರ್ ಆಗಿ ಅರವಿಂದ ಬೆಲ್ಲದ ಅವರನ್ನ‌ ಆಯ್ಕೆ ಮಾಡಿದ್ದಾರೆ. ಇನ್ನು ಹೊಸದಾಗಿ ಆಯ್ಕೆಯಾದ ಮೇಯರ್, ಉಪ ಮೇಯರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಾಲಿಕೆಯಲ್ಲಿ 82 ವಾರ್ಡಗಳಲ್ಲಿ 39 ಬಿಜೆಪಿ, 34 ಕಾಂಗ್ರೆಸ್, 03 ಎಂಐಎಂ, 1 ಜೆಡಿಎಸ್, ಪಕ್ಷೇತರ 6 ಸೇರಿದಂತೆ 82 ವಾರ್ಡಗಳಲ್ಲಿ ಸದಸ್ಯರು ಆಯ್ಕೆರಾಗಿದ್ದಾರೆ. 

Hubballi- Dharwad: ಕರೆ ಮಾಡಿದ್ರೆ, ಕೋವಿಡ್ ರೋಗಿಗಳ ಮನೆ ಬಾಗಿಲಿಗೆ ಕೋವಿಡ್ ಕಿಟ್

ಇನ್ನು ಹುಬ್ಬಳ್ಳಿ_ಧಾರವಾಡ ಅವಳಿ ನಗರದಲ್ಲಿ ಕಳೆದ ಐದು ತಿಂಗಳಿಂದ 82 ವಾರ್ಡ್‌ಗಳ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ ಇದುವರೆಗೂ ಮೇಯರ್ ಉಪ ಮೇಯರ್ ಆಯ್ಕೆಯಾಗಿಲ್ಲ. ಅದಕ್ಕೆ‌ ಇಂದು ಸದಸ್ಯರುಗಳು ಸೇರಿ, ಅಣುಕು ಪ್ರದರ್ಶನ ಮಾಡಿ, ಮಾಜಿ ಸಿಎಂ ಜಗದೀಶ ಶೆಟ್ಡರ ಅವರನ್ನ ಮೇಯರ್ ಆಗಿ ಆಯ್ಕೆ ಮಾಡಿ, ಉಪ ಮೇಯರ್ ಆಗಿ ಶಾಸಕ ಅರವಿಂದ ಬೆಲ್ಲದ ಅವರನ್ನ ಆಯ್ಕೆ ಮಾಡಿ ಅಧಿಕಾರವನ್ನ ಕೊಟ್ಟಿದ್ಧಾರೆ. ಇನ್ನಾದರೂ ಎಚ್ಚೆತ್ತುಕ್ಕೊಂಡು ಬಿಜೆಪಿ ನಾಯಕರುಗಳು ಮೇಯರ್ ಉಪಮೇಯರ್ ಆಯ್ಕೆ ಮಾಡಬೇಕಿದೆ. ಜೊತೆಗೆ ಸದಸ್ಯರಿಗೆ ಅಧಿಕಾರವನ್ನ ಕೊಡಬೇಕಾಗಿದೆ. 

Related Video