Hubballi-Dharwad: ಕರೆ ಮಾಡಿದ್ರೆ, ಕೋವಿಡ್ ರೋಗಿಗಳ ಮನೆ ಬಾಗಿಲಿಗೆ ಕೋವಿಡ್ ಕಿಟ್

- ಕೋವಿಡ್ ರೋಗಿಗಳ ಮನೆ ಬಾಗಿಲಿಗೆ ಕೋವಿಡ್ ಕಿಟ್ ವಿತರಣೆ 

- ವಿನೂತನ ಪ್ಲಾನ್ ಮಾಡಿದ ಪಾಲಿಕೆ ಕಮಿಷನರ್ ಗೋಪಾಲಕೃಷ್ಣ

-ಹೋಮ್ ಐಸೂಲೇಶನ್ ನಂಬರ್: 08362213803, 9141051611 
 

First Published Jan 28, 2022, 5:23 PM IST | Last Updated Jan 28, 2022, 5:23 PM IST

ಧಾರವಾಡ (ಜ. 28): ರಾಜ್ಯದಲ್ಲಿ ದಿನೆ ದಿನೆ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಎರಡು ಅಲೆಯಲ್ಲಿ ಕೊರೊನಾ ರೋಗಿಗಳು ಅನುಭವಿಸಿದ ತೊಂದರೆಯನ್ನು ಮತ್ತೆ ಅನುಭವಿಸಬಾರದು ಎಂದು ಹುಬ್ಬಳ್ಳಿ-ಧಾರವಾಡ (Hubballi Dharwad) ಮಹಾನಗರ ಪಾಲಿಕೆಯ ಕಮಿಷನರ್ ಆರ್ ಗೋಪಾಲಕೃಷ್ಣ ಸೋಂಕಿತರ ಮನೆ ಬಾಗಿಲಿಗೆ ಔಷಧಿಯನ್ನ ತಲುಪಿಸುವ ವಿನೂತನ ಕಾರ್ಯಕ್ರಮವನ್ನ  ರೂಪಿಸಿದ್ದಾರೆ. 

ಧಾರವಾಡ ಹುಬ್ಬಳ್ಳಿ ಅವಳಿ ನಗರದಲ್ಲಿ ದಿನೆ ದಿನೇ ಕೊರೊನಾ ಕೇಸ್‌ಗಳು ಹೆಚ್ಚುತ್ತಿವೆ. ಅದರಲ್ಲಿ ಎರಡನೇ ಅಲೆಗಿಂತ ಮೂರನೇಯ ಅಲೆಯಲ್ಲಿ ಶೇ 90 ರಷ್ಡು ಜನರು ‌ಹೋಂ ಐಶೋಲೇಶನಲ್ಲಿ‌ದ್ದಾರೆ. ಅವರೆಲ್ಲರಿಗೂ ಮನೆ ಮನೆಗೆ ಔಷಧಿ ಕಿಟ್ ಕೊಡಲು ಅವಳಿ‌ನಗರದ 12 ಝೋನಲ್ ಕಚೇರಿಯಲ್ಲಿ ಪ್ರತಿ ಝೋನ್‌ಗೆ ಎರಡು ವಾಹನದಂತೆ, 25 ವಾಹನಗಳನ್ನ ಪಡೆದುಕೊಂಡಿದ್ದಾರೆ.‌ ಒಂದು ವಾಹನದಲ್ಲಿ ಮೂವರು ಸಿಬ್ಬಂದಿಗಳನ್ನ ನೇಮಕ ಮಾಡಿದ್ದಾರೆ. ಯಾರೇ ಕೋವಿಡ್ ಪೇಶಂಟ್‌ಗಳು ನಿಗದಿಪಡಿಸಿದ ನಂಬರ್‌ಗಳಿಗೆ ಕರೆ ಮಾಡಿದರೆ ಸಾಕು ಮನೆ ಬಾಗಿಲಿಗೆ ತೆರಳಿ ಕಿಟ್ ನೀಡುತ್ತಿದ್ದಾರೆ. ಇನ್ನು ಈ ಯೋಜನೆಯ ವೆಚ್ಚವನ್ನ ಪಾಲಿಕೆ ಮತ್ತು ಜಿಲ್ಲಾಡಳಿತ ಭರಿಸಲಿದೆ ಎಂದು ಹೇಳ್ತಾರೆ ಕಮಿಷನರ್ ಗೋಪಾಲಕೃಷ್ಣ.

ದಿನದ 24 ಘಂಟೆಗಳಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಿದರೆ ಸಾಕು,  ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಔಷಧಿಯನ್ನ ಕೊಡಲು ಸಜ್ಜಾಗಿದ್ದಾರೆ. ಈಗಾಗಲೆ‌ ಎರಡು ಅಲೆಯಲ್ಲಿ ಕೊವಿಡ್ ಕಿಟ್ ಗಾಗಿ ಜನಸಾಮಾನ್ಯರು ತುಂಬಾ ತೊಂದರೆಯನ್ನು ಅನುಭವಿಸಿದ್ರು. ಆದರೆ ಈ ತೊಂದರೆಯನ್ನ ಮೂರನೇಯ ಅಲೆಯಲ್ಲಿ ಅನುಭವಿಸಬಾರದು ಎಂದು ಕಮಿಷನರ್ ಅವರು ಸಹಾಯವಾಣಿ ಆರಂಭಿಸಿದ್ದಾರೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಿಷನರ್ ವ್ಯಾಪ್ತಿಯಲ್ಲಿ ಧಾರವಾಡ ಮಹಾನಗರ ಪಾಲಿಕೆ ಕೆಲಸವನ್ನ ಮಾಡುತ್ತಿದೆ. ಜನರು ಕೂಡಾ ಈ ವಿನೂತನ ಯೋಜನೆಯನ್ನ ಸದುಪಯೋಗಪಡಿಸಿಕ್ಕೋಳ್ಳಬೇಕು ಅಂತಾರೆ ಸ್ಥಳಿಯ ನಿವಾಸಿಗಳು. 
 

Video Top Stories