ಬೆಂಗಳೂರಿನ ಯಾವೆಲ್ಲ ಏರಿಯಾಗಳು ಕೊರೋನಾ ಹಾಟ್‌ಸ್ಪಾಟ್‌ಗಳಾಗಿವೆ..? ಇಲ್ಲಿವೆ ಕಂಪ್ಲೀಟ್ ಡೀಟೈಲ್ಸ್
ಬೆಂಗಳೂರು(ಏ.15): ಕೊರೋನಾ ವೈರಸ್ ರಾಜ್ಯದಲ್ಲೂ ತಲ್ಲಣ ಮೂಡಿಸಿದ್ದು, ಬೆಂಗಳೂರು ಅತಿಹೆಚ್ಚು ಸೋಂಕಿತರನ್ನು ಹೊಂದಿದ ನಗರ ಎನಿಸಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಕೊರೋನಾ ವೈರಸ್ ಸೋಂಕಿತರಿದ್ದಾರೆ.
ಕಲಬುರಗಿಯಲ್ಲಿ 14 ತಿಂಗಳ ಹಸುಳೆಗೂ ಗಂಟು ಬಿದ್ದ ಕೊರೋನಾ ಹೆಮ್ಮಾರಿ!
ಇನ್ನು ವಾರ್ಡ್‌ವಾರು ಗಮನಿಸುವುದಾದರೆ ಬೆಂಗಳೂರಿನ 198 ವಾರ್ಡ್‌ಗಳ ಪೈಕಿ 37 ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರಿದ್ದಾರೆ. ಹಾಟ್ ರೆಡ್ ಝೋನ್‌ನಲ್ಲಿ ಬೆಂಗಳೂರಿನ ಮೂರು ಕ್ಷೇತ್ರಗಳಿರುವುದು ಸಾಕಷ್ಟು ಆತಂಕ ಮೂಡಿಸಿದೆ.
ಬೆಂಗಳೂರಿನ ಒಂದೇ ಕ್ಷೇತ್ರದಲ್ಲಿ ಬರೋಬ್ಬರಿ 11 ಸೋಂಕಿತರಿದ್ದಾರೆ. ಬೆಂಗಳೂರಿನ ಯಾವೆಲ್ಲ ವಾರ್ಡ್‌ಗಳು ಕೊರೋನಾ ಹಾಟ್‌ಸ್ಪಾಟ್‌ಗಳಾಗಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.