Asianet Suvarna News Asianet Suvarna News

ಕಲಬುರಗಿಯಲ್ಲಿ 14 ತಿಂಗಳ ಹಸುಳೆಗೂ ಗಂಟು ಬಿದ್ದ ಕೊರೋನಾ ಹೆಮ್ಮಾರಿ!

ಕೊರೋನಾ ವೈರಸ್ ಹಿರಿಯರಿಗಷ್ಟೇ ಅಲ್ಲ. ಇದೀಗ ಚಿಕ್ಕ ಮಕ್ಕಳು ಸಹ ಸೋಂಕಿಗೆ ತುತ್ತಾಗಿರುವ ಆಘಾತಕಾರಿ ಮಾಹಿತಿ ಬಯಲಾಗಿದೆ.
14 Month Baby infected by coronavirus In Kalaburagi
Author
Bengaluru, First Published Apr 15, 2020, 6:22 PM IST
ಕಲಬುರಗಿ, (ಏ.15): ಕಲಬುರಗಿಯಲ್ಲಿ 14 ತಿಂಗಳ ಹಸುಳೆಗೂ ಕೊರೋನಾ ಹೆಮ್ಮಾರಿ ಗಂಟು ಬಿದ್ದಿದೆ.

ವಿಷಮಶೀತ ಜ್ವರದಿಂದ ನರಳುತ್ತಿದ್ದ ಕಲಬುರಗಿ ತಾಲೂಕಿನ ಕವಲಗಾ (ಬಿ) ಗ್ರಾಮದ 14 ತಿಂಗಳ ಗಂಡು ಮಗುವಿನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಬುಧವಾರದ ವೈದ್ಯಕೀಯ ವರದಿ ಬಹಿರಂಗಪಡಿಸಿದೆ.

ರಾಜ್ಯದಲ್ಲಿ ಕಳೆದ 6 ದಿನದಲ್ಲಿ 15 ಮಕ್ಕಳಿಗೆ ತಗುಲಿದೆ ಕೊರೋನಾ ಸೋಂಕು..! 

ಕವಲಗಾದ ಈ ಮಗು ಶೀತ ಹಾಗೂ ಜ್ವರದಿಂದ ನರಳುತ್ತಿತ್ತು, ಪೋಷಕರು ತಕ್ಷಣ ಮಗುವನ್ನು ಕಲಬುರಗಿ ಆಸ್ಪತ್ರೆಗೆ ತಂದು ತೋರಿಸಿದ್ದಾರೆ, ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುವುದರ ಜೊತೆಗೇ ಮಗುವಿನಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದ ಕಾರಣ ಜಿಮ್ಸ್ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ.

ಅಲ್ಲಿ ಮಗುವಿನ ಗಂಟಲು ದ್ರವ ಪಡೆದು ಕೋವಿಡ್- 19 ಪರೀಕ್ಷೆ ನಡೆಸಿದಾಗ ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಶೀತಜ್ವರದ ಲಕ್ಷಣ (ಇನ್‍ಫ್ಲುಯಂಜಾ ಲೈಕ್ ಇಲ್‍ನೆಸ್) ದಿಂದ ಮಗು ನರಳುತ್ತಿದ್ದು ಎಂದು ಪ್ರಯೋಗಾಲಯ ವರದಿಯಲ್ಲಿ ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಹಿರಿಯರು ಮಾತ್ರವಲ್ಲದೇ ಮಕ್ಕಳನ್ನು ಸಹ ಎಚ್ಚರಿಕೆಯಿಮದ ನೋಡಿಕೊಳ್ಳಬೇಕು.
Follow Us:
Download App:
  • android
  • ios