Asianet Suvarna News Asianet Suvarna News

ಕುಂತಲ್ಲೆ ಖಾತೆಗೆ ಹಣ, ಉಚಿತ ಬಸ್ ಪ್ರಯಾಣ: ಕಾಂಗ್ರೆಸ್ 5 ಗ್ಯಾರೆಂಟಿ ಯೋಜನೆ ಜಾರಿ!

ಬಾಡಿಗೆಯಲ್ಲಾದರೂ ಇರಿ, ಯಾರೇ ಆದರೂ ಕರೆಂಟ್ ಉಚಿತ, ಮನೆಯ ಯಜಮಾನಿಗೆ 2,000 ರೂಪಾಯಿ, ಯಾವುದೇ ಷರತ್ತಿಲ್ಲ, ಯುವನಿಧಿ ಸೌಲಭ್ಯ ಪಡೆಯಲು 6 ತಿಂಗಳ ಒಳಗೆ ಅರ್ಜಿ ಸಲ್ಲಿಸಿ, ಕಾಂಗ್ರೆಸ್ ಪಂಚ ಗ್ಯಾರೆಂಟಿ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ.
 

ಕಾಂಗ್ರೆಸ್ ಘೋಷಿಸಿದ ಐದು ಉಚಿತ ಗ್ಯಾರೆಂಟಿ ಯೋಜನೆಯನ್ನು ಹೆಚ್ಚಿನ ಯಾವುದೇ ಷರತ್ತುಗಳಿಲ್ಲದೆ ಸರ್ಕಾರ ಜಾರಿಗೊಳಿಸಿದೆ. ಜೂನ್ 11 ರಿಂದ ಕಾಂಗ್ರೆಸ್ ಉಚಿತ ಯೋಜನೆ ಜಾರಿಗೊಳ್ಳುತ್ತಿದೆ. ಕಾಂಗ್ರೆಸ್ ಉಚಿತ ಗ್ಯಾರೆಂಟಿಗಳ ಪೈಕಿ 10 ಕೆಜಿ ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ಜಾರಿಯಾಗುತ್ತಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಉಚಿತ ಅಕ್ಕಿ ಸಿಗಲಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.ಕರ್ನಾಟಕ ವಿಳಾಸದ ಆಧಾರ್ ಕಾರ್ಡ್ ಇದ್ದರೆ ಸಾಕು ಸಾಮಾನ್ಯ ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ. ಈ ಯೋಜನೆ ಜೂನ್ 11 ರಿಂದ ಜಾರಿಯಾಗಲಿದೆ. ಎಲ್ಲಾ ಮಹಿಳೆಯರಿಗೆ ಇದು ಅನ್ವಯವಾಗಲಿದೆ.ಕಾಲೇಜು ಮುಗಿಸಿ ಹೊರಬಂದ ಬೆನ್ನಲ್ಲೇ ಅರ್ಜಿ ಹಾಕಲು ಪದವೀಧರರು, ಡಿಪ್ಲೋಮಾ ಕೋರ್ಸ್ ಮುಗಿಸಿದವರಿಗೆ ಅರ್ಹರಾಗಿದ್ದಾರೆ. 2 ವರ್ಷಗಳ ಕಾಲ ನಿರುದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಕಾಂಗ್ರೆಸ್ ಪಂಚ ಗ್ಯಾರೆಂಟಿ ಯೋಜನೆ ಕುರಿತು ವಿವರ ಇಲ್ಲಿದೆ.