Assembly Session: ಏನಿಲ್ಲ ಏನಿಲ್ಲ ಬಿಜೆಪಿ ನಾಯಕರ ತಲೆಯಲ್ಲಿ ಏನಿಲ್ಲ: ಸಿಎಂ ಸಿದ್ದರಾಮಯ್ಯ ಕೌಂಟರ್‌

ಮತ್ತೆ ಸದನದಲ್ಲಿ ಸದ್ದು ಮಾಡಿದ ಏನಿಲ್ಲ ಏನಿಲ್ಲ ಸಾಂಗ್
ಸಾಂಗ್ ಮೂಲಕವೇ ಬಿಜೆಪಿಗೆ ತಿರುಗೇಟು ಕೊಟ್ಟ ಸಿಎಂ
ಕೇಂದ್ರದ ಅನುದಾನ ತಾರತಮ್ಯದ ವಿರುದ್ಧ ಮತ್ತೆ ಕಿಡಿ

First Published Feb 20, 2024, 3:58 PM IST | Last Updated Feb 20, 2024, 4:18 PM IST

ಸದನದಲ್ಲಿ ಏನಿಲ್ಲಾ..ಏನಿಲ್ಲಾ ಸಾಂಗ್ ಮತ್ತೆ ಸದ್ದು ಮಾಡಿದೆ. ಸಾಂಗ್ ಮೂಲಕವೇ ಬಿಜೆಪಿಗೆ(BJP) ಸಿಎಂ ಸಿದ್ದರಾಮಯ್ಯ(CM Siddaramaiah) ತಿರುಗೇಟು ನೀಡಿದ್ದಾರೆ. ಬಿಜೆಪಿಯವರ ತಲೆಯಲ್ಲಿ ಏನಿಲ್ಲ ಎಂದು ಕೌಂಟರ್ ನೀಡಿದ್ದಾರೆ. ಅಶೋಕ್‌, ಸುನೀಲ್ ಕುಮಾರ್(Sunil Kumar) ಏನಿಲ್ಲ ಏನಿಲ್ಲ ಅಂತಿದ್ರು. ಅಂದ್ರೆ ಏನಿಲ್ಲ ಏನಿಲ್ಲ‌ ಬಿಜೆಪಿಯವರ ತಲೆಯಲ್ಲಿ ಏನಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ. ಕೇಂದ್ರದ ಅನುದಾನ ತಾರತಮ್ಯದ ವಿರುದ್ಧವೂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಜೆಟ್‌(Budget) ಪ್ರತಿಯಲ್ಲಿ ಏನಿದೆ ಎಂಬುದನ್ನು ತಿಳಿಯದೇ ಬರೀ ಏನಿಲ್ಲ ಏನಿಲ್ಲ ಎಂದಿದ್ದಾರೆ. ಮೊದಲು ಕೇಳಿ, ಆಮೇಲೆ ಸರಿಯಿಲ್ಲ ಅಂದ್ರೆ ಹೇಳಿ. ಅದನ್ನು ಬಿಟ್ಟು ಏನಿಲ್ಲ ಏನಿಲ್ಲ ಅಂದ್ರೆ ಹೇಗೆ ಎಂದು ಸಿಎಂ ಪ್ರಶ್ನಿಸಿದರು.

ಇದನ್ನೂ ವೀಕ್ಷಿಸಿ:  ವಿನಯ್ ಬಿದರೆಗೆ ಸಿಗುತ್ತಾ ತುಮಕೂರು ಬಿಜೆಪಿ ಟಿಕೆಟ್..? ಟಿ.ಬಿ.ಜಯಚಂದ್ರ ಸ್ಪರ್ಧೆಗೆ ಒತ್ತಡ ಹಾಕುತ್ತಿರುವ ಸಿಎಂ !

Video Top Stories