Asianet Suvarna News Asianet Suvarna News

ವಿನಯ್ ಬಿದರೆಗೆ ಸಿಗುತ್ತಾ ತುಮಕೂರು ಬಿಜೆಪಿ ಟಿಕೆಟ್..? ಟಿ.ಬಿ.ಜಯಚಂದ್ರ ಸ್ಪರ್ಧೆಗೆ ಒತ್ತಡ ಹಾಕುತ್ತಿರುವ ಸಿಎಂ !

ಕಾಂಗ್ರೆಸ್‌ನಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಲೆಕ್ಕಾಚಾರ ಜೋರು
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಪರ ಸಿಎಂ ಬ್ಯಾಟಿಂಗ್
ಗುಬ್ಬಿ ಶಾಸಕ ಶ್ರೀನಿವಾಸ್ ಪತ್ನಿ ಭಾರತಿದೇವಿ ಪರ ಡಿಸಿಎಂ ಒಲವು

ತುಮಕೂರು ಲೋಕಸಭೆ (Tumakuru Loksabha) ಕ್ಷೇತ್ರದಲ್ಲಿ ಒಳ-ಹೊರಗಿನ ಗುದ್ದಾಟ ಹೆಚ್ಚಾಗಿದೆ. ಟಿಕೆಟ್‌ಗಾಗಿ(Ticket) ಸ್ಥಳೀಯ V/S ಹೊರಗಿನ ಆಕಾಂಕ್ಷಿಗಳ ನಡುವೆ ಕಾದಾಟ ಶುರುವಾಗಿದೆ. ಬಿಜೆಪಿ(BJP) ಟಿಕೆಟ್‌ಗಾಗಿ ಸ್ಥಳೀಯರ ಕಸರತ್ತು‌ ಮುಂದುವರೆದಿದೆ. ವಿ. ಸೋಮಣ್ಣಗೆ(V Somanna) ಟಾಂಗ್ ಕೊಡಲು ಸ್ಥಳೀಯ ಅಭ್ಯರ್ಥಿ ಕೂಗು ಕೇಳಿಬರುತ್ತಿದೆ. ಜಿಲ್ಲಾ ಖಜಾಂಜಿ ಪರಮೇಶ್ ಆಯ್ತು, ಇದೀಗ ದೊಡ್ಡಮನೆ ಗೋಪಾಲಗೌಡ ಸರದಿಯಾಗಿದೆ. ನಾನು ಟಿಕೆಟ್ ಆಕಾಂಕ್ಷಿ ಎಂದ ಹಿರಿಯ ನ್ಯಾಯವಾದಿ ಗೋಪಾಲಗೌಡ ಹೇಳಿದ್ದಾರೆ. ಗೋಪಾಲಗೌಡ ಬೆಂಬಲಿಗರು ಹಾಗೂ ವಕೀಲರಿಂದ ಬಿಜೆಪಿ ನಾಯಕರಿಗೆ ಪತ್ರ ಬರೆಯಲಾಗಿದ್ದು, ಒಕ್ಕಲಿಗ ಸಮುದಾಯದ ಮಠಾಧೀಶರ ಮೂಲಕ ವರಿಷ್ಠರಿಗೆ ಒತ್ತಡ ಹೇರಲಾಗುತ್ತಿದೆ. ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ಮುಂದುವರೆದಿದೆ. ತಾನೂ ತುಮಕೂರು ಆಕಾಂಕ್ಷಿ ಎನ್ನುತ್ತಿರುವ ವಿನಯ್ ಬಿದರೆ. ದೆಹಲಿ ಮಟ್ಟದ ನಾಯಕರಲ್ಲಿಯೂ ವಿನಯ್ ಬಿದರೆ ಬಗ್ಗೆ ಮಾತುಕತೆ ನಡೆಯುತ್ತಿದೆ. 

ಇದನ್ನೂ ವೀಕ್ಷಿಸಿ:  Bjp Internal Survey: ಸರ್ವೆ ಆಧಾರದ ಮೇಲೆ ಹಂಚಿಕೆಯಾಗುತ್ತಾ ಟಿಕೆಟ್..? ಆಂತರಿಕ ಸರ್ವೆಯಲ್ಲಿ ಕೇಳಿದ್ದೇನು..?

Video Top Stories