Asianet Suvarna News Asianet Suvarna News

ತಾಳಿ ಅಡವಿಟ್ಟು ಅಂತ್ಯಸಂಸ್ಕಾರ: ನೆರವಿನ ಭರವಸೆ ನೀಡಿದ ಸಿಎಂ

ದಗ ಜಿಲ್ಲೆಯ ನರಗುಂದ ತಾಲೂಕಿನ ಕಣ್ಣೂರಿನಲ್ಲಿ ಫಕೀರಪ್ಪ 108 ಆಂಬ್ಯಲೆನ್ಸ್ ಡ್ರೈವರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಫಕೀರಪ್ಪ ಕರ್ತವ್ಯಕ್ಕೆ ಹಾಜರಾಗಿ ಒಂದುಯಾಗುವಷ್ಟರಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಮಾಹಿತಿ ತಿಳಿದ ಪತ್ನಿ ಜ್ಯೋತಿ, ಫಕೀರಪ್ಪ ಅವರನ್ನು ರಾಮದುರ್ಗಕ್ಕೆ ಕೊಂಡ್ಯೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಫಕೀರಪ್ಪ ಕೊನೆಯುಸಿರೆಳೆದಿದ್ದರು. 

ಗದಗ(ಜೂ.01): 108 ಆಂಬ್ಯುಲೆನ್ಸ್ ಚಲಾಯಿಸುತ್ತಿದ್ದಾಗ ಹೃದಾಯಾಘಾತದಿಂದ ಮೃತಪಟ್ಟ ಫಕೀರಪ್ಪನ ಪತ್ನಿ ತನ್ನ ಮಾಂಗಲ್ಯ ಸರ ಅಡವಿಟ್ಟು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಕ್ತ ನೆರವಿನ ಭರವಸೆ ನೀಡಿದ್ದಾರೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಣ್ಣೂರಿನಲ್ಲಿ ಫಕೀರಪ್ಪ 108 ಆಂಬ್ಯಲೆನ್ಸ್ ಡ್ರೈವರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಫಕೀರಪ್ಪ ಕರ್ತವ್ಯಕ್ಕೆ ಹಾಜರಾಗಿ ಒಂದುಯಾಗುವಷ್ಟರಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಮಾಹಿತಿ ತಿಳಿದ ಪತ್ನಿ ಜ್ಯೋತಿ, ಫಕೀರಪ್ಪ ಅವರನ್ನು ರಾಮದುರ್ಗಕ್ಕೆ ಕೊಂಡ್ಯೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಫಕೀರಪ್ಪ ಕೊನೆಯುಸಿರೆಳೆದಿದ್ದರು. 

ಸಾರಿಗೆ ಸಂಸ್ಥೆಗಳ ನೌಕರರಿಗೆ ಬಿಗ್ ಶಾಕ್; ಶೇ. 50 ರಷ್ಟು ವೇತನ ಕಡಿತ?

ಆರ್ಥಿಕ ಸಂಕಷ್ಟದಿಂದಾಗಿ ತಾಳಿ ಅಡವಿಟ್ಟು ಅಂತ್ಯ ಸಂಸ್ಕಾರ ಮಾಡಿದ ವಿಚಾರ ಮಾಧ್ಯಮದವರಿಂದ ತಿಳಿಯುತ್ತಿದ್ದಂತೆ ಫಕೀರಪ್ಪ ಪತ್ನಿಗೆ ಕರೆಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈಗಾಗಲೇ ಜಿಲ್ಲಾಧಿಕಾರಿಯವರ ಬಳಿ ಮಾತನಾಡಿದ್ದೇನೆ. ನೀವು ಸಮಾಧಾನವಾಗಿರಿ. ಸರ್ಕಾರದ ವತಿಯಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.