ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?

* ಕೋವಿಡ್‌ ನಿಯಂತ್ರಣ ಸಂಬಂಧ ಸೆಮಿ ಲಾಕ್‌ಡೌನ್‌ 

* ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರೂ ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರಿಹಾರ

* 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ 

* ಯಾವ ವರ್ಗಕ್ಕೆ ಏನು ಸಿಕ್ಕಿದೆ? ಇಲ್ಲಿದೆ ಸಿಎಂ ಸುದ್ದಿಗೋಷ್ಠಿಯ ಮುಖ್ಯಾಂಶ.

Karnataka CM announces special package to needy during Covid 19 pandemic lockdown pod

ಬೆಂಗಳೂರು(ಮೇ.19): ಕೊರೋನಾ ನಿಯಂತ್ರಣ ಸಂಬಂಧ ಸೆಮಿ ಲಾಕ್‌ಡೌನ್‌ ವಿಧಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರೂ ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರಿಹಾರ ಘೋಷಿಸಿದ್ದಾರೆ. ಒಟ್ಟು 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಯಾವ ವರ್ಗಕ್ಕೆ ಏನು ಸಿಕ್ಕಿದೆ? ಇಲ್ಲಿದೆ ಸಿಎಂ ಸುದ್ದಿಗೋಷ್ಠಿಯ ಮುಖ್ಯಾಂಶಗಳು.

"

ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ, ಮೇ 24ರಿಂದ ನಿರ್ಬಂಧ ಅನಿವಾರ್ಯವಾಗಿತ್ತು. ಮೊದಲ ಕೊರೋನಾ ಅಲೆ ಬಂದಾಗಲೂ ಪಗ್ಯಾಕೇಜ್ ಘೋಷಿಸಿದ್ದೆವು, ಈಗ ಎರಡನೇ ಅಲೆ ಬಂದಾಗಲೂ ನೆರವಿಗೆ ಧಾವಿಸಿದ್ದೇವೆ ಎನ್ನುವ ಮೂಲಕ ಸಿಎಂ ಪ್ಯಾಕೇಜ್ ಘೋಷಿಸಿದ್ದಾರೆ.

* ಒಟ್ಟು 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ

* ಪ್ರತಿ ಹೆಕ್ಟೇರ್ ಹೂವು ಹಾನಿಗೆ 10 ಸಾವಿರ ರೂ. ಸಹಾಯಧನ

* ಹಣ್ಣು ತರಕಾರಿ ಬೆಳೆಗಾರರಿಗೆ 10 ಸಾವಿರ ಕೋಟಿ

* 20 ಸಾವಿರ ರೈತರಿಗೆ ನೆರವು, 12.73 ಕೋಟಿ ಮೊತ್ತದ ನೆರವು

* ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ

* ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ಪರಿಹಾರ

* ಬೀದಿ ವ್ಯಾಪಾರಸ್ತರಿಗೆ ತಲಾ 2 ಸಾವಿರ ಪರಿಹಾರ

* ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂ.

* ಸಹಕಾರಿ ಸಂಘಗಳಿಂದ ರೈತರ ಸಾಲ ಮರುಪಾವತಿ ದಿನಾಂಕ ವಿಸ್ತರಣೆ, 31 ಜುಲೈ ಗೆ ಅವಧಿ ವಿಸ್ತರಣೆ

* ಬಿಪಿಎಲ್ ಕಾರ್ಡುದಾರರಿಗೆ 5 ಕೆ.ಜಿ ಅಕ್ಕಿ ವಿತರಿಸಲು ನಿರ್ಧಾರ

* APL ಕಾರ್ಡುದಾರರಿಗೆ 15 ರೂ. ನಂತೆ 5 ಕೆಜಿ ಅಕ್ಕಿ

* ಆರು ಲಕ್ಷ ಜನರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ

* ಕಲಾವಿದರು ಕಲಾ ತಂಡಗಳಿಗೆ ತಲಾ 3 ಸಾವಿರ ರೂಪಾಯಿ

* ಲೈನ್ ಮೆನ್ ಗಳು, ಗ್ಯಾಸ್ ಸಿಲೆಂಡರ್ ವಿತರಕರನ್ನ ಫ್ರೆಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಲು ಆದ್ಯತೆ.

* ಮೂರು ಕೋಟಿ ಲಸಿಕೆ ಖರೀದಿಗೆ ನಿಗದಿ

* ಕೋವಿಡ್ ನಿರ್ವಹಣೆಗಾಗಿ ಎಸ್.ಡಿ.ಎಫ್ ಹಣವನ್ನ ಪ್ರತಿ ಗ್ರಾಮ ಪಂಚಾಯತಿಳಿಗೆ 50 ಸಾವಿರ ಅನುದಾನ. ಪ್ರತಿ ಗ್ರಾಮ ಪಂಚಾಯತ್‌ನಲ್ಲೂ ಕೋವಿಡ್ ನಿರ್ವಹಣೆಗೆ SDRF ಹಣ ಬಳಕೆ.

ಎಲ್ಲರಿಗೂ ಹಣ ತಲುಪಿಸಲು ಪ್ರಯತ್ನ ಮಾಡುತ್ತೇವೆ. ಫಲಾನುಭವಿಗಳ ಖಾತೆಗೆ ನೇರವಾಗಿ ಈ ಹಣ ವರ್ಗಾವಣೆ ಮಾಡುವುದಾಗಿಯೂ ಸಿಎಂ ಘೋಷಿಸಿದ್ದಾರೆ. ಇನ್ನು ಇದೇ ವೇಳೆ ಲಾಕ್‌ಡೌನ್ ಬಗ್ಗೆ ಮಾತನಾಡಿದ ಬಿಎಸ್‌ವೈಲಾಕ್‌ಡೌನ್ ವಿಸ್ತರಣೆ ಬಗ್ಗೆ ಮೇ 23ಕ್ಕೆ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios