ಗೌರಿಬಿದನೂರಿನ ಲಂಬಾಣಿ ಹುಡುಗ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ ಆಯ್ಕೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಡಮಿ ತಾಂಡಾದ ಓಂ ಪ್ರಕಾಶ್ ನಾಯ್ಕ್. ಹೆಬ್ಬಾಳ ಕೃಷಿ ವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮುಗಿಸಿ ಇದೀಗ ದೆಹಲಿಯ ಪೂಸಾದ ಭಾರತೀಯ ಕೃಷಿ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್ ಡಿ ಮಾಡುತ್ತಿದ್ದಾರೆ.
ಬೆಂಗಳೂರು (ಜ.27): ಕೃಷಿ ನಂಬಿ ಕೆಟ್ಟವರಿಲ್ಲ, ಬದುಕು ಕಟ್ಟಿ ಮೆರೆದವರೇ ಎಲ್ಲಾ..! ಹೀಗೆ ಭೂಮಿತಾಯಿ ಮಡಲು ನಂಬಿ, ಜಗತ್ತಿಗೆ ಅನ್ನ ಉಣಿಸುವ ಅನ್ನದಾತನ ಬದುಕಿಗೆ ಹೊಸ ಆರ್ಥಿಕ ಆಯಾಮ ಕಲ್ಪಿಸಬೇಕು ಅನ್ನೋ ಕನಸು ಆ ಲಂಬಾಣಿ ತಾಂಡದ ಹುಡುಗನದ್ದು. ಕನ್ನಡ ಶಾಲೆ, ಅಪ್ಪನಿಗಿದ್ದ ಎರಡು ಎಕರೆ ಜಮೀನು ಆ ತಾಂಡ ಹುಡುಗನ ಉಸಿರಾಯ್ತು. ಅದೇ ಮಣ್ಣಿನ ವಾಸನೆಯಲ್ಲೇ ಬೆಳೆದ. ಅಪ್ಪ ನಂಬಿದ್ದ ಕೃಷಿಯನ್ನೇ ಅಧ್ಯಯನ ಮಾಡಿದ. ಅದರಲ್ಲೇ ಸಂಶೋಧನೆ ಕೂಡ ಮಾಡಿದ. ಈತನ ಸಂಶೋಧನೆಗೆ ಆರ್ಥಿಕ ಬೆನ್ನೆಲುಬು ಆಗಿದ್ದು ಜೆಆರ್ ಎಫ್ ಫೆಲೋಶಿಫ್. ಆ ಯುವಕನೇ ಹೆಸರು ಓಂ ಪ್ರಕಾಶ್ ನಾಯ್ಕ.
ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪದ ತಂತ್ರಾಂಶ ಅಳವಡಿಕೆ: ಸಚಿವ ಸೋಮಶೇಖರ್
ವಿಜ್ಞಾನಿಯಾಗಿ ಆಯ್ಕೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಡಮಿ ತಾಂಡಾದ ನಿವಾಸಿ ತಂದೆ ನಾಗೇ ನಾಯ್ಕ್, ತಾಯಿ ಲಕ್ಷ್ಮೀ ಬಾಯಿ ಪುತ್ರ ಈ ಓಂ ಪ್ರಕಾಶ್ ನಾಯ್ಕ್. ಹೆಬ್ಬಾಳ ಕೃಷಿ ವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮುಗಿಸಿ ಇದೀಗ ದೆಹಲಿಯ ಪೂಸಾದ ಭಾರತೀಯ ಕೃಷಿ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್ ಡಿ ಮಾಡುತ್ತಿದ್ದಾರೆ.
ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಹಾಪ್‌ಕಾಮ್ಸ್ ಇದೆಯೇ?, ಪತ್ತೆಗೆ ಸಮಿತಿ ರಚನೆ
ಇನ್ನು ಸಂಶೋಧನಾ ವಿದ್ಯಾರ್ಥಿಯಾಗಿರುವ ಓಂ ಪ್ರಕಾಶ್ ನಾಯ್ಕ್ ಅಭ್ಯಸಿಸುತ್ತಿರುವಾಗಲೇ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ (ಕೃಷಿ ಸಂಶೋಧನಾ ಸೇವೆ) ಆಗಿ ಆಯ್ಕೆಯಾಗಿದ್ದಾರೆ. ಅಂದರೆ ಕೃಷಿ ಆರ್ಥಿಕತೆಯ ವಿಭಾಗದಲ್ಲಿ ಕೃಷಿ ವಿಜ್ಞಾನಿಯಾಗಿ ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ.