ಚಾಮರಾಜನಗರದಲ್ಲಿ ಆಕ್ಸಿಜನ್ ಎಮರ್ಜೆನ್ಸಿ: ಸರ್ಕಾರ ಏನ್ರಿ ಮಾಡ್ತಿದೆ? ಎಚ್‌ಡಿಕೆ ತರಾಟೆ

ಚಾಮರಾಜನಗರದಲ್ಲಿ ಅಕ್ಸಿಜನ್ ಎಮರ್ಜೆನ್ಸಿಯಿಂದಾಗಿ 24 ಗಂಟೆಗಳಲ್ಲಿ 24 ಮಂದಿ ಸಾವನ್ನಪ್ಪಿರುವ ದುರಂತ ನಡೆದಿದೆ. ಮೃತರ ಸಂಬಂಧಿಕರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 
 

First Published May 3, 2021, 2:53 PM IST | Last Updated May 3, 2021, 3:01 PM IST

ಬೆಂಗಳೂರು (ಮೇ. 03): ಚಾಮರಾಜನಗರದಲ್ಲಿ ಅಕ್ಸಿಜನ್ ಎಮರ್ಜೆನ್ಸಿಯಿಂದಾಗಿ 24 ಗಂಟೆಗಳಲ್ಲಿ 24 ಮಂದಿ ಸಾವನ್ನಪ್ಪಿರುವ ದುರಂತ ನಡೆದಿದೆ. ಮೃತರ ಸಂಬಂಧಿಕರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಚಾಮರಾಜನಗರದಲ್ಲಿ ಆಕ್ಸಿಜನ್ ಎಮರ್ಜೆನ್ಸಿ; ಸರ್ಕಾರವನ್ನು ದೂಷಿಸಿ ನುಣುಚಿಕೊಳ್ಳಲೆತ್ನಿಸಿದ ಶಾಸಕ

'2 ನೇ ಅಲೆಯ ಗಂಭೀರತೆ ಅರ್ಥವಾದರೂ, ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ರೆಮ್ಡಿಸಿವಿರ್ ಸಂಗ್ರಹವಿದೆ ಅಂತಾರೆ. ಆದರೆ ಸೋಂಕಿತರಿಗೆ ಸಿಗುತ್ತಿಲ್ಲ. ಆಕ್ಸಿಜನ್ ಇದೆ ಅಂತಾರೆ. ಸಿಗದೇ ಸಾಯುತ್ತಿದ್ದಾರೆ. ಕೋ ಆರ್ಡಿನೇಷನ್ ಸಮಸ್ಯೆ ಇದೆ. ಜನ ಹೀಗೆ ಸಾಯುತ್ತಿದ್ದರೂ ಸರ್ಕಾರ ಏನು ಮಾಡುತ್ತಿದೆ..? ಇಂತಹ ಸರ್ಕಾರ ಇದ್ದರೆಷ್ಟು..? ಹೋದರೆಷ್ಟು..?' ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. 

Video Top Stories