ಚಾಮರಾಜನಗರದಲ್ಲಿ ಆಕ್ಸಿಜನ್ ಎಮರ್ಜೆನ್ಸಿ; ಸರ್ಕಾರವನ್ನು ದೂಷಿಸಿ ನುಣುಚಿಕೊಳ್ಳಲೆತ್ನಿಸಿದ ಶಾಸಕ
ಆಕ್ಸಿಜನ್ ಸಿಗದೇ ಕೋವಿಡ್, ನಾನ್ ಕೋವಿಡ್ ರೋಗಿಗಳು ಸೇರಿ 24 ಜನ ಸಾವನ್ನಪ್ಪಿದ್ದಾರೆ. ಕಳೆದ 3 ದಿನಗಳಿಂದ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿದೆ
ಚಾಮರಾಜನಗರ (ಮೇ. 03): ಆಕ್ಸಿಜನ್ ಸಿಗದೇ ಕೋವಿಡ್, ನಾನ್ ಕೋವಿಡ್ ರೋಗಿಗಳು ಸೇರಿ 24 ಜನ ಸಾವನ್ನಪ್ಪಿದ್ದಾರೆ. ಕಳೆದ 3 ದಿನಗಳಿಂದ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿದೆ. ಈ ಬಗ್ಗೆ ಶಾಸಕ ಪುಟ್ಟರಂಗ ಶೆಟ್ಟಿಯವರನ್ನು ಪ್ರಶ್ನಿಸಿದಾಗ, ನಾವು ಆಕ್ಸಿಜನ್ ಪೂರೈಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ತಲುಪುವುದು ವಿಳಂಬವಾಗಿದೆ. ನಾವು ಅಧಿಕಾರಿಗಳನ್ನು, ಜಿಲ್ಲಾಧಿಕಾರಿಗಳನ್ನು ವಿಚಾರಿಸಿದಾಗ ಬರುತ್ತದೆ, ಬರುತ್ತದೆ ಎಂದು ಹೇಳುತ್ತಾರೆಯೇ ವಿನಃ ಇನ್ನೂ ಕಳುಹಿಸಿಲ್ಲ. ಉಸ್ತುವಾರಿ ಸಚಿವರಿಗೆ ಕರೆ ಮಾಡಿದರೆ, ಕರೆ ಸ್ವೀಕರಿಸುತ್ತಿಲ್ಲ, ನಾವೇನು ಮಾಡೋಣ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಆಕ್ಸಿಜನ್ ಇಲ್ಲದೇ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20 ಮಂದಿ ಸಾವು