Asianet Suvarna News Asianet Suvarna News

ಡೇಂಜರ್‌ ಡೆಂಘಿ 2, ಮನೆಯಲ್ಲಿ ಮುಂಜಾಗ್ರತಾ ಕ್ರಮ ಹೇಗಿರಬೇಕು.? ವೈದ್ಯರ ಮಾತು

ಒಂದೆಡೆ ಕೊರೋನಾ 3 ನೇ ಅಲೆ ಭೀತಿಯಲ್ಲಿದ್ದರೆ ಇನ್ನೊಂದೆಡೆ ಅಪಾಯಕಾರಿ ಮಾದರಿಯ ಡೆಂಘೀ ಜ್ವರ ಪತ್ತೆಯಾಗಿದೆ. 

Sep 20, 2021, 2:30 PM IST

ಬೆಂಗಳೂರು (ಸೆ. 20): ಒಂದೆಡೆ ಕೊರೋನಾ 3 ನೇ ಅಲೆ ಭೀತಿಯಲ್ಲಿದ್ದರೆ ಇನ್ನೊಂದೆಡೆ ಅಪಾಯಕಾರಿ ಮಾದರಿಯ ಡೆಂಘೀ ಜ್ವರ ಪತ್ತೆಯಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, ಮಧ್ಯಪ್ರದೇಶ, ಕೇರಳ, ಉತ್ತರಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಹೊಸ ಮಾದರಿಯ ಡೆಂಘೀ ಪತ್ತೆಯಾಗಿದೆ.

ವಯಸ್ಸು 50 ಪ್ಲಸ್ ಆಗ್ತಾ ಇದೆಯಾ..? ಆಹಾರದಲ್ಲಿರಲಿ ಈ ಬದಲಾವಣೆ

'ಇದು ತಾಜಾ ನೀರಿನಲ್ಲಿ ಮೊಟ್ಟೆ ಇಡುವ ಸೊಳ್ಳೆ. ಮನೆಯ ಮುಂದೆ ಹೂವಿನ ಕುಂಡ, ನೀರಿನ ತೊಟ್ಟಿಯಲ್ಲಿನ ನೀರನ್ನು ಖಾಲಿ ಮಾಡಿ. ಈ ಸೊಳ್ಳೆ ಹಗಲು ಹೊತ್ತು ಕಚ್ಚುತ್ತದೆ. ಸೆರೋ​ಟೈಪ್‌-2 ಡೆಂಘೀ ತಗು​ಲಿ​ದರೆ ಅತಿ​ಯಾದ ತಲೆ​ನೋವು, ಜ್ವರ, ವಾಂತಿ, ಆಯಾಸ, ಆಂತ​ರಿ​ಕ ರಕ್ತ​ಸ್ರಾವ ಆಗುವ ಭೀತಿ ಇರು​ತ್ತದೆ' ಎಂದು ತಜ್ಞ ವೈದ್ಯ ಡಾ,. ಆಂಜನಪ್ಪ ಸಲಹೆ ನೀಡಿದ್ದಾರೆ.