Asianet Suvarna News Asianet Suvarna News

ಬೆಂಗಳೂರು: ಕಾರು ಟರ್ನ್ ಮಾಡೋಕೆ ಹೋಗಿ ಬೈಕ್ ಸವಾರನ ಮೇಲೆ ಹತ್ತಿಸಿದ ವೈದ್ಯೆ

ಅಜಾಗರೂಕತೆಯಿಂದ ಬಂದು ಬೈಕ್ ಸವಾರನ ಮೇಲೆ ವೈದ್ಯೆ ಲಕ್ಷ್ಮೀ ಎಂಬುವವರು ಕಾರು ಹತ್ತಿಸಿದ್ದು, ಸ್ವಲ್ಪದರಲ್ಲೇ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕೆ.ಕೆ.ಲೇಔಟ್ ನಲ್ಲಿ ಘಟನೆ ನಡೆದಿದೆ. 

ಬೆಂಗಳೂರು (ಮೇ. 23): ಅಜಾಗರೂಕತೆಯಿಂದ ಬಂದು ಬೈಕ್ ಸವಾರನ ಮೇಲೆ ವೈದ್ಯೆ ಲಕ್ಷ್ಮೀ ಎಂಬುವವರು ಕಾರು ಹತ್ತಿಸಿದ್ದು, ಸ್ವಲ್ಪದರಲ್ಲೇ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕೆ.ಕೆ.ಲೇಔಟ್ ನಲ್ಲಿ ಘಟನೆ ನಡೆದಿದೆ. 

ಬಾಂಗ್ಲಾದೇಶದ ಹುಡುಗಿಗೆ ಬೆಂಗಳೂರಲ್ಲಿ ರೇಪ್, ದುರುಳರ ಅತ್ಯಾಚಾರವನ್ನು ವಿಡಿಯೋ ಮಾಡಿದ ಗೆಳತಿ

ಕಾರು ಟರ್ನ್ ಮಾಡೋಕೆ‌ ಹೋಗಿ ಬೈಕ್ ಚಾಲಕನ ಮೇಲೆ ಕಾರು ಹತ್ತಿಸಿದ್ದಾರೆ ಚಾಲಕಿ. ಸವಾರ ಕಾರು ಚಕ್ರಕ್ಕೆ ಸಿಲುಕಿದ್ರೂ ಕಂಟ್ರೋಲ್ ಸಿಗದೇ ಆತನ ಮೇಲೆ ಹತ್ತಿಸಿರುವುದನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಅಪಘಾತದಲ್ಲಿ ಗಾಯಗೊಂಡ ಸವಾರ ಪ್ರಭಾಕರ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಕಾರ್ ಚಾಲಕಿ ಲಕ್ಷ್ಮೀ ವಶಕ್ಕೆ ಪಡೆದು,  ಎಫ್ ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.