ಪರಿಹಾರಕ್ಕಾಗಿ ಕುಟುಂಬ ಕಲಹ; 'ಚಿಕ್ಕಪ್ಪನ ಪರಿಹಾರ ನಮಗೆ ಕೊಡಿ' ಎಂದ ಅರ್ಚಕರ ಪುತ್ರಿಯರು

ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ನಾರಾಯಣಾಚಾರ್ ಕುಟುಂಬದಲ್ಲಿ ಪರಿಹಾರ ಹಣ ವಿಚಾರವಾಗಿ ಕಲಹ ಉಂಟಾಗಿದೆ. ನಾರಾಯಣಾಚಾರ್ ಮನೆಯಲ್ಲಿದ್ದ ಆನಂದ ತೀರ್ಥರಿಗೆ ಸಚಿವ ವಿ ಸೋಮಣ್ಣ 5 ಲಕ್ಷ ರೂ ಪರಿಹಾರ ನೀಡಿದ್ದರು. ಇದಕ್ಕೆ ನಾರಾಯಣಾಚಾರ್ ಪುತ್ರಿಯರು ಆಕ್ಷೇಪ ತೆಗೆದಿದ್ದಾರೆ. 'ಚಿಕ್ಕಪ್ಪನನ್ನು ನಾವು ನೋಡಿಕೊಂಡಿದ್ದೇವೆ. ಅವರ ಕುಟುಂಬಕ್ಕೆ ಪರಿಹಾರ ನೀಡುವುದು ಸರಿಯಲ್ಲ. ಇದನ್ನು ತಡೆ ಹಿಡಿಯಿರಿ' ಎಂದು ಮಡಿಕೇರಿ ತಹಶೀಲ್ದಾರರಿಗೆ ಮನವಿ ಮಾಡಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಕೊಡಗು (ಆ. 16): ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ನಾರಾಯಣಾಚಾರ್ ಕುಟುಂಬದಲ್ಲಿ ಪರಿಹಾರ ಹಣ ವಿಚಾರವಾಗಿ ಕಲಹ ಉಂಟಾಗಿದೆ. ನಾರಾಯಣಾಚಾರ್ ಮನೆಯಲ್ಲಿದ್ದ ಆನಂದ ತೀರ್ಥರಿಗೆ ಸಚಿವ ವಿ ಸೋಮಣ್ಣ 5 ಲಕ್ಷ ರೂ ಪರಿಹಾರ ನೀಡಿದ್ದರು. ಇದಕ್ಕೆ ನಾರಾಯಣಾಚಾರ್ ಪುತ್ರಿಯರು ಆಕ್ಷೇಪ ತೆಗೆದಿದ್ದಾರೆ. 'ಚಿಕ್ಕಪ್ಪನನ್ನು ನಾವು ನೋಡಿಕೊಂಡಿದ್ದೇವೆ. ಅವರ ಕುಟುಂಬಕ್ಕೆ ಪರಿಹಾರ ನೀಡುವುದು ಸರಿಯಲ್ಲ. ಇದನ್ನು ತಡೆ ಹಿಡಿಯಿರಿ' ಎಂದು ಮಡಿಕೇರಿ ತಹಶೀಲ್ದಾರರಿಗೆ ಮನವಿ ಮಾಡಿಕೊಂಡಿದ್ದಾರೆ. 

ಬೆಟ್ಟವೇ ಕುಸಿದು ಮನೆಯ ಮೇಲೆ ಬಿದ್ದರೆ ಬದುಕುವುದೆಂತಯ್ಯಾ? ಎಲ್ಲಿ ನೋಡಿದ್ರೂ ಅವಾಂತರವಯ್ಯಾ..!

Related Video