ಈಶ್ವರಪ್ಪ ಮುಸ್ಲಿಂ ಗೂಂಡಾ ಹೇಳಿಕೆ: ಇರ್ವರ್ಯಾರ್ರೀ ಇಂತ ಹೇಳಿಕೆ ಕೊಡೋಕೆ.? ಬಿಕೆ ಹರಿಪ್ರಸಾದ್
ಈಶ್ವರಪ್ಪ (Eshwarappa) ಶಿವಮೊಗ್ಗ (Shivamogga) ಉಸ್ತುವಾರಿ ಸಚಿವರೇನ್ರಿ..? ಪೊಲೀಸ್ ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ಇವರ್ಯಾರ್ರೀ ಇಂತಹ ಹೇಳಿಕೆ ಕೊಡೋಕೆ..? ಇವರೊಬ್ಬ ರಾಷ್ಟ್ರದ್ರೋಹಿ. ಇವರನ್ನು ಸಂಪುಟದಿಂದ ವಜಾಗೊಳಿಸಬೇಕು' ಎಂದು ಹರಿಪ್ರಸಾದ್ (BK Hariprasad) ವಾಗ್ದಾಳಿ ನಡೆಸಿದರು.
ಬೆಂಗಳೂರು (ಫೆ. 22): ಯುವಕನ ಕೊಲೆ ಸಂಬಂಧ ಪೊಲೀಸ್ ತನಿಖೆ ನಡೆಯುವ ಮುನ್ನವೇ ಈಶ್ವರಪ್ಪ ಅವರು, ಮುಸ್ಲಿಂ ಗೂಂಡಾಗಳು ಕೊಲೆಗೆ ಕಾರಣ ಎಂದು ಹೇಳಿರುವುದನ್ನು ನೋಡಿದರೆ, ಅವರಿಗೆ ಎಲ್ಲ ಬಗೆಯ ಮಾಹಿತಿ ಮೊದಲೇ ಗೊತ್ತಿತ್ತು ಎಂದು ಕಾಣುತ್ತದೆ. ಘಟನೆ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕಿತ್ತು, ಘಟನೆ ಬಗ್ಗೆ ಪೊಲೀಸ್ ತನಿಖೆ ನಡೆಯದೇ ಈಶ್ವರಪ್ಪ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ, ಅವರಿಗೆ ಬಹುಶಃ ಸಂಪೂರ್ಣ ಮಾಹಿತಿ ಇತ್ತೆಂದು ಕಾಣುತ್ತದೆ ಎಂದು ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
Shivamogga:ಮುಸ್ಲಿಂ ಗೂಂಡಾಗಳೇ ಹರ್ಷನ ಕೊಲೆ ಮಾಡಿದ್ದು, ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ
ಈಶ್ವರಪ್ಪ (Eshwarappa) ಶಿವಮೊಗ್ಗ (Shivamogga) ಉಸ್ತುವಾರಿ ಸಚಿವರೇನ್ರಿ..? ಪೊಲೀಸ್ ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ಇವರ್ಯಾರ್ರೀ ಇಂತಹ ಹೇಳಿಕೆ ಕೊಡೋಕೆ..? ಇವರೊಬ್ಬ ರಾಷ್ಟ್ರದ್ರೋಹಿ. ಇವರನ್ನು ಸಂಪುಟದಿಂದ ವಜಾಗೊಳಿಸಬೇಕು' ಎಂದು ಹರಿಪ್ರಸಾದ್ (BK Hariprasad) ವಾಗ್ದಾಳಿ ನಡೆಸಿದರು. ಹರ್ಷ ನಿವಾಸಕ್ಕೆ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿ ಸಾಂತ್ವನ ಹೇಳಿದರು.