ಸಿಎಂ ವಿರುದ್ಧ ಬಹಿರಂಗ ಹೇಳಿಕೆ, ವಿಶ್ವನಾಥ್ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ

- ಮುಖ್ಯಮಂತ್ರಿಗಳ ಪರ, ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವವರ ವಿರುದ್ಧ ಬಿಜೆಪಿ ಶಿಸ್ತು ಕ್ರಮಕ್ಕೆ ಮುಂದು

- ಯತ್ನಾಳ್‌, ಬೆಲ್ಲದ, ರೇಣು,ಯೋಗಿ, ಎಚ್‌ವಿ ವಿರುದ್ಧ ಶಿಸ್ತುಕ್ರಮ?

- ಬಹಿರಂಗ ಹೇಳಿಕೆ: ಕ್ರಮಕ್ಕೆ ಕೇಂದ್ರ ಸಮಿತಿಗೆ ಶಿಫಾರಸು

First Published Jun 18, 2021, 10:08 AM IST | Last Updated Jun 18, 2021, 10:21 AM IST

ಬೆಂಗಳೂರು (ಜೂ. 18): ಮುಖ್ಯಮಂತ್ರಿಗಳ ಪರ ಮತ್ತು ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವವರ ವಿರುದ್ಧ ಬಿಜೆಪಿ ಶಿಸ್ತು ಕ್ರಮಕ್ಕೆ ಮುಂದಾಗಿದ್ದು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಶಿಸ್ತು ಸಮಿತಿ ವತಿಯಿಂದ ಕೇಂದ್ರಿಯ ಶಿಸ್ತು ಸಮಿತಿಗೆ ಶಿಫಾರಸು ಮಾಡಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡ್ತೀರೋ? ಇಲ್ಲೋ? ಎಂದ ಕತ್ತಿ

ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ್‌ ಬೆಲ್ಲದ, ಎಂ.ಪಿ.ರೇಣುಕಾಚಾರ್ಯ, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌, ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಮಾತ್ರವಲ್ಲ, ಬಹಿರಂಗ ಹೇಳಿಕೆ ನೀಡಿರುವ ಇನ್ನೂ ಕೆಲವು ಶಾಸಕರ ಹೆಸರು ಕೂಡಾ ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.