ತಾಲಿಬಾನ್‌- ಆರ್‌ಎಸ್‌ಎಸ್‌ ವ್ಯತ್ಯಾಸ ಗೊತ್ತು, ಜನ ದಡ್ಡರಲ್ರೀ, ಸಿದ್ದು ಆರಗ ಗುದ್ದು!

ಸಿದ್ದರಾಮಯ್ಯ ತಾಲಿಬಾನ್ ಹೇಳಿಕೆಗೆ ಬಿಜೆಪಿಗರು ತಿರುಗೇಟು ನೀಡುತ್ತಿದ್ದಾರೆ. ಪದೇ ಪದೇ ಸಿದ್ದರಾಮಯ್ಯನವರು ಆರ್‌ಎಸ್‌ಎಸ್, ಬಿಜೆಪಿ ತಾಲಿಬಾನಿಗಳು ಎನ್ನುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 

Suvarna News| Asianet News | Updated : Sep 28 2021, 03:32 PM
Share this Video

ಬೆಂಗಳೂರು (ಸೆ. 28): ಸಿದ್ದರಾಮಯ್ಯ ತಾಲಿಬಾನ್ ಹೇಳಿಕೆಗೆ ಬಿಜೆಪಿಗರು ತಿರುಗೇಟು ನೀಡುತ್ತಿದ್ದಾರೆ. 

ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ರಾಕ್ಷಸೀ ಪ್ರವೃತ್ತಿ ಇರುವ ತಾಲಿಬಾನಿಗಳು: ಸಿದ್ದರಾಮಯ್ಯ

'ತಾಲಿಬಾನ್‌ಗೂ, ಆರ್‌ಎಸ್‌ಎಸ್‌ಗೂ ಇರುವ ವ್ಯತ್ಯಾಸಗಳನ್ನು ಹಿರಿಯರಾದ ಅವರು ಅರ್ಥ ಮಾಡಿಕೊಳ್ಳಬೇಕು. ಜನ ದಡ್ಡರಲ್ಲ. ಆರ್‌ಎಸ್‌ಎಸ್‌ ಒಳ್ಳೆಯ ಕಾರ್ಯಗಳ ಬಗ್ಗೆ ಜನರಿಗೆ ಅರಿವಿದೆ. ನಾವೆಲ್ಲರೂ ಆರ್‌ಎಸ್‌ಎಸ್‌ ಹಿನ್ನಲೆಯಿಂದಲೇ ಬಂದವರು. ದೇಶದ ಹಿತದ ಬಗ್ಗೆ, ದೇಶಕ್ಕಾಗಿ ಕೆಲಸ ಮಾಡು ಎಂದು ಆರ್‌ಎಸ್‌ಎಸ್ ಹೇಳಿಕೊಡುತ್ತದೆ. ಇದು ಸಿದ್ದರಾಮಯ್ಯನವರಿಗೂ ಗೊತ್ತಿದೆ. ವಿರೋಧ ಪಕ್ಷದ ನಾಯಕರಾಗಿ ನಮ್ಮನ್ನು ಕೆಣಕಬೇಕು, ಅಪಹಾಸ್ಯ ಮಾಡಬೇಕೆಂದು ಹೀಗೆಲ್ಲಾ ಹೇಳಿಕೆ ಕೊಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

Related Video