Asianet Suvarna News Asianet Suvarna News

ಮತಾಂತರಕ್ಕೆ ಮುಂದಾದ್ರೆ ಸರ್ಕಾರದಿಂದ ಪಂಚ್, ಕಲಾಪದಲ್ಲಿ ಜಾರಿದ ಸಿದ್ದು ಪಂಚೆ!

Sep 22, 2021, 11:39 PM IST

ಬೆಂಗಳೂರು(ಸೆ.22):  ಮತಾಂತರ ನಿಷೇಧದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದ್ದು ಕರ್ನಾಟಕ ಸರ್ಕಾರ ಕಾನೂನು ರಚನೆಗೆ ಸಿದ್ಧತೆ ಮಾಡಿಕೊಂಡಿದೆ. ನನ್ನ ಹೆತ್ತ ತಾಯಿಯನ್ನೇ ಮತಾಂತರ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ನೋವು ತೋಡಿಕೊಂಡಿದ್ದಾರೆ. ಆದರೆ ಇದನ್ನು ಕ್ರಿಶ್ಚಿಯನ್ ಅಸೋಸಿಯೇಷನ್ ಅಲ್ಲಗಳೆದಿದೆ.

ಮಮತಾ ಚುನಾವಣಾ ಭವಿಷ್ಯ ನುಡಿದ ಕುಮಾರಸ್ವಾಮಿ

ಮೈಸೂರಿನಲ್ಲಿ ನಡೆದಿದ್ದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ಗಂಭೀರ ಚರ್ಚೆಯಲ್ಲಿ ತೊಡಗಿಕೊಂಡಿದ್ದಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಚೆ ಸಡಿಲವಾದ ಪ್ರಸಂಗಕ್ಕೂ ವಿಧಾನಸಭೆ ಸಾಕ್ಷಿಯಾಯಿತು.  ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ. ಕೈಗಾರಿಕೆಗೆ ಎಂದು ಮೀಸಲಿಟ್ಟಿದ್ದ ಭೂಮಿಯನ್ನು ಮನುವಾದಿಗಳ ಸಂಸ್ಥೆಗೆ ಯಾಕೆ ಕೊಟ್ರಿ ಎಂದು ಪ್ರಶ್ನೆ ಮಾಡಿದ್ದಾರೆ.   ಕರ್ನಾಟಕ ರಾಜಕಾರಣದಲ್ಲಿ ಬೆಳವಣಿಗೆ ನಡೆಯುತ್ತಿದೆ.  ಕಾಂಗ್ರೆಸ್ ನಾಯಕ ಸಿಎಂ  ಇಬ್ರಾಹಿಂ ಮತ್ತು  ಎಚ್‌ಡಿ ಕುಮಾರಸ್ಚಾಮಿ ಮಾತುಕತೆ ನಡೆಸಿದ್ದಾರೆ.

 

Video Top Stories