ಪರಿಸ್ಥಿತಿ ಕೈಮೀರಿದ ಬಳಿಕ ಜವಾಬ್ದಾರಿ ಹಂಚಿಕೆ: ಕೇಸರಿ ಪಾಳಯದಲ್ಲಿ ಗುಸು ಗುಸು!

ಕೋವಿಡ್‌ ನಿರ್ವಹಣೆ ಹೊಣೆ ಹಿರಿಯ ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಆದರೀಗ ಸಿಎಂ ಈ ನಿರ್ಧಾರದ ಹಿಂದೆ ಕೆಲ ಪಟ್ಟಭದ್ರ ಹಿತಾಸಕ್ತಿ ಕೆಲಸವಿದೆ ಎಂಬ ಗುಸು ಗುಸು  ಮಾತುಗಳು ಕೇಸರಿ ಪಾಳಯದಲ್ಲೇ ಕೇಳಿ ಬಂದಿವೆ. 

First Published May 6, 2021, 5:13 PM IST | Last Updated May 6, 2021, 5:13 PM IST

ಬೆಂಗಳೂರು(ಮೇ.06)ಕೋವಿಡ್‌ ನಿರ್ವಹಣೆ ಹೊಣೆ ಹಿರಿಯ ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಆದರೀಗ ಸಿಎಂ ಈ ನಿರ್ಧಾರದ ಹಿಂದೆ ಕೆಲ ಪಟ್ಟಭದ್ರ ಹಿತಾಸಕ್ತಿ ಕೆಲಸವಿದೆ ಎಂಬ ಗುಸು ಗುಸು  ಮಾತುಗಳು ಕೇಸರಿ ಪಾಳಯದಲ್ಲೇ ಕೇಳಿ ಬಂದಿವೆ. 

ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಎರಡು ತಿಂಗಳ ಹಿಂದೆಯೇ ಸಲಹಾ ಸಮಿತಿ ವರದಿ ನೀಡಿತ್ತು. ಈ ವರದಿಯಂತೆ ಕ್ರಮ ಕೈಗೊಳ್ಳಿ ಎಂದು ಆರೋಗ್ಯ ಸಚಿವ ಸುಧಾಕರ್ ಸಿಎಂಗೆ ಮನವಿ ಮಾಡಿದ್ದರು ಎನ್ನಲಾಗಿದೆ.

ನನ್ನ ಹೆಂಡತಿಗೂ ವೆಂಟಿಲೇಟರ್‌ ಸಿಕ್ಕಿಲ್ಲ, ಸೋತಿದ್ದೇನೆ: ಅಸಹಾಯಕತೆ ತೋಡಿಕೊಂಡ DHO!

ಆದರೆ ಈ ಕಠಿಣ ಕ್ರಮಕ್ಕೆ ಕೆಲ ಹಿರಿಯ ಸಚಿವರು ವಿರೋಧಿಸಿದ್ದರೆನ್ನಲಾಗಿದೆ. ಈ ವೇಳೆ ತಜ್ಞರು ಸಚಿವರ ನಡೆಗೆ ವಿಷಾದ ವ್ಯಕ್ತಪಡಿಸಿದ್ದರೆನ್ನಲಾಗಿದೆ. 

ಹೀಗಿರುವಾಗ ತಜ್ಞರ ಸಲಹೆಯಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದರೀಗ ಪರಿಸ್ಥಿತಿ ಕೈಮೀರಿದ ಬಳಿಕ ಜವಾಬ್ದಾರಿ ಹಂಚಿಕೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಸದ್ದು ಮಾಡಿವೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories